Breaking News

ಮತಯಂತ್ರದಲ್ಲಿ ದೋಷ, ಒಂದು ಗಂಟೆಯಿಂದ ಮತದಾನ ಸ್ಥಗಿತ

Spread the love

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸಾತನೂರು ಗ್ರಾಮದಲ್ಲಿನ ಮತಗಟ್ಟೆ ಸಂಖ್ಯೆ 165ರಲ್ಲಿ ಮತಯಂತ್ರದಲ್ಲಿ ದೋಷವುಂಟಾಗಿ ಮತದಾನದ ನಂತರ ಬೀಪ್ ಸೌಂಡ್ ಬಾರದೆ ಬೆಳಿಗ್ಗೆ 10.30ರಿಂದ 11.38ರ ವರೆಗೆ ಮತದಾನ ಸ್ಥಗಿತಗೊಂಡಿತ್ತು.

ಮತಯಂತ್ರದಲ್ಲಿ ದೋಷ ಕಾಣುವ ಸಮಯದವರೆಗೆ ಒಟ್ಟು 185 ಮತದಾರರು ತಮ್ಮ ಮತ ಹಕ್ಕು ಚಲಾಯಿಸಿದ್ದರು.ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದ್ದ ಮತದಾರರು ಮತದಾನ ಮಾಡಲಾಗದೆ ಸರದಿ ಸಾಲಿನಲ್ಲಿಯೇ ನಿಂತ ಸ್ಥಳದಲ್ಲಿಯೆ ಕುಳಿತಿದ್ದರು.

ಈಗ ಮನೆಗೆ ಹೋಗುತ್ತೇವೆ ಬಿಸಿಲು ಕಡಿಮೆಯಾದ ನಂತರ ಸಾಯಂಕಾಲ ಐದು ಗಂಟೆಗೆ ಮತ್ತೆ ಬಂದು ಮತದಾನ ಮಾಡುತ್ತೇವೆ ಎಂದು ವಯಸ್ಸಾದ ಮಹಿಳಾ ಮತದಾರರು ಮನೆಗೆ ಹೋಗಲು ಅಣಿಯಾದಾಗ, ಹೋಗಬೇಡಿ ದುರಸ್ತಿ ಮಾಡುತ್ತಿದ್ದಾರೆ. ಮತ ಚಲಾಯಿಸಿ ಹೋಗಬೇಕು ಎಂದು ಗ್ರಾಮದ ರಾಜಕೀಯ ಕಾರ್ಯಕರ್ತರು ಮತದಾರರಿಗೆ ಮನವಿ ಮಾಡಿದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ