Breaking News

ಮೊಬೈಲ್‌ಗ‌ಳಲ್ಲಿ ಅಶ್ಲೀಲ ವೀಡಿಯೋ ಇಟ್ಟುಕೊಳ್ಳದಿರಿ: ಎಸ್‌ಐಟಿ

Spread the love

ಬೆಂಗಳೂರು: ಸಾರ್ವಜನಿಕರು ಅಶ್ಲೀಲ ವೀಡಿಯೋ, ಚಿತ್ರಗಳು ಹಾಗೂ ಧ್ವನಿಮುದ್ರಿಕೆಗಳನ್ನು ಇರಿಸಿಕೊಳ್ಳುವುದು ಅಪರಾಧ. ಒಂದು ವೇಳೆ ಅಂತಹ ವೀಡಿಯೋಗಳನ್ನು ಮೊಬೈಲ್‌ ಅಥವಾ ಇತರ ಸಾಧನಗಳಲ್ಲಿ ಇದ್ದರೆ ಡಿಲೀಟ್‌ ಮಾಡಿ ಕಾನೂನು ಕ್ರಮದಿಂದ ಪಾರಾಗುವಂತೆ ಸಿಐಡಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಮುಖಸ್ಥ ಬಿ.ಕೆ.ಸಿಂಗ್‌ ತಿಳಿಸಿದ್ದಾರೆ.

ಶಿಕ್ಷಾರ್ಹ ಅಪರಾಧ ಲೈಂಗಿಕ ದೌರ್ಜನ್ಯದ ವೀಡಿಯೋಗಳ ಹಂಚಿಕೆ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ಮಾಹಿತಿ ಮತ್ತು ತಂತ್ರಜ್ಞಾನ ಅಧಿನಿಯಮದಲ್ಲಿ ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇರಿಸಿಕೊಳ್ಳುವ, ಪ್ರಸಾರ ಮಾಡುವ ವ್ಯಕ್ತಿಗಳನ್ನು ಸಂದೇಶದ ರಚನಕಾರರು ಎಂದು ಪರಿಗಣಿಸಲಾಗುತ್ತದೆ.

ಹೀಗಾಗಿ ಯಾರಾದರೂ ತಮ್ಮ ಮೊಬೈಲ್‌ ಅಥವಾ ಇತರ ಸಾಧನಗಳಲ್ಲಿ ಅಶ್ಲೀಲ ವೀಡಿಯೊಗಳು, ಚಿತ್ರಗಳು ಹಾಗೂ ಧ್ವನಿ ಮುದ್ರಣಗಳನ್ನು ಹೊಂದಿದ್ದರೆ ಡಿಲೀಟ್‌ ಮಾಡಿದರೆ ಕಾನೂನು ಕ್ರಮಗಳಿಂದ ಪಾರಾಗಬಹುದು ಎಂದು ಬಿ.ಕೆ.ಸಿಂಗ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ