Breaking News

ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿ: ಕಂಬಕ್ಕೆ ತಾಯಿ ಕಟ್ಟಿಹಾಕಿ ಥಳಿತ, ಪ್ರಕರಣ ದಾಖಲು!

Spread the love

ಹಾವೇರಿ: ಪ್ರೀತಿಸಿದ ಯುವತಿಯೊಂದಿಗೆ ಯುವಕ ಪರಾರಿಯಾದನೆಂಬ ಕಾರಣಕ್ಕೇ ಆತನ ತಾಯಿಯನ್ನು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಧಾರುಣ ಘಟನೆ ಹಾವೇರಿಯ ರಾಣೆಬೆನ್ನೂರಿನಲ್ಲಿ ಶುಕ್ರವಾರ ವರದಿಯಾಗಿದೆ.

ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಮಾಸುವ ಮುನ್ನವೇ ಇದೀಗ ಹಾವೇರಿ ಜಿಲ್ಲೆಯಿಂದಲೂ ಅಂತಹದ್ದೇ ಅಮಾನುಷ ಘಟನೆ ರಾಣೆಬೆನ್ನೂರಿನಲ್ಲಿ ವರದಿಯಾಗಿದೆ.

ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪುರ ಗ್ರಾಮದಲ್ಲಿ ಪ್ರೀತಿಸಿದ ಅನ್ಯ ಜಾತಿಯ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಯುವಕನ ತಾಯಿ‌ಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.

 

ಗ್ರಾಮದ ನಿವಾಸಿ ಸುಮಾರು 50 ವರ್ಷದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದ್ದು, ಸಂತ್ರಸ್ಥೆ ಹನುಮವ್ವಳ ಮಗ ಮಂಜುನಾಥ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ಯುವತಿ ಪೋಷಕರಾದ ಚಂದ್ರಪ್ಪ, ಗಂಗಪ್ಪ, ಗುತ್ತೆವ್ವ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ಗಾಯಗೊಂಡ ಮಹಿಳೆ ಹನುಮವ್ವಳನ್ನ ತಾಲೂಕುನ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಕೊಡಿಸಲಾಗಿದೆ.

ಗ್ರಾಮದ ಯುವಕ ಮಂಜುನಾಥ ಎಂಬಾತ ಅನ್ಯ ಜಾತಿಯ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ತಿಳಿದು ತಾಯಿ ಕರೆದುಕೊಂಡು ಬಂದು ಆತನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾರೆ. ಯುವತಿಯ ಮನೆವರಾದ ಚಂದ್ರಪ್ಪ, ಗಂಗಪ್ಪ ಮತ್ತು ಗುತ್ತೆವ್ವ ಎಂಬುವರು ಸೇರಿ , ಮಂಜುನಾಥನ‌ ತಾಯಿಯಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ನಡೆದ ಘಟನೆಯಾಗಿದ್ದು ಹುಡುಗ ಮತ್ತು ಯುವತಿಯ ಕಡೆಯಿಂದ ಪ್ರತ್ಯೇಕವಾಗಿ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಎರಡು ಪ್ರಕರಣ ದಾಖಲಾಗಿವೆ. ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.


Spread the love

About Laxminews 24x7

Check Also

ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ ಸ್ಪರ್ಧೆ; ಅಜೀತ್ ಸಿದ್ಧನ್ನವರ

Spread the love ಜ.19 ರಂದು ’12ನೇ ಸತೀಶ್ ಶುಗರ್ಸ್ ಕ್ಲಾಸಿಕ್-2026′ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಬೃಹತ್ ದೇಹದಾರ್ಢ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ