ಚಿಕ್ಕಬಳ್ಳಾಪುರ: ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ತಾಲೂಕು ಪಂಚಾಯತ್ ಇಒ ಒಬ್ಬರು ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪಂಚಾಯತ್ ನಲ್ಲಿ ನಡೆದಿದೆ.

ಶಿಡ್ಲಘಟ್ಟ ತಾಲೂಕು ಪಂಚಾಯತ್ ನ ಇಒ ಮುನಿರಾಜು ಲೋಕಾಯುಕ್ತ ಬಲೆಗೆ ಬಿದ್ದ ಅದಿಕಾರಿಯಾಗಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿ ಘಟ್ಟಮಾರನಹಳ್ಳಿ ಗ್ರಾಮದ 39 ಗುಂಟೆ ಭೂಪರಿವರ್ತಿತ ಜಮೀನಿಗೆ ಪ್ಲಾನ್ ಮಾಡಿಕೊಡಲು ನಂಜೇಗೌಡ ಎಂಬುವರಿಂದ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಅದರಂತೆ ಇಂದು ಒಂದೂವರೆ ಲಕ್ಷ ಹಣ ನೀಡಲು ಮಾತುಕತೆ ನಡೆದಿತ್ತು ಅದರಂತೆ ನಂಜೇಗೌಡ ಅವರು ಮುನಿರಾಜು ಅವರ ಕಚೇರಿಯಲ್ಲಿ ಹಣ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
Laxmi News 24×7