Breaking News

5 ವರ್ಷದವರೆಗೆ ಯಾಕೆ ಬಾಯಿ ಮುಚ್ಚಿಕೊಂಡಿದ್ರು? ‘ ಸಂತ್ರಸ್ತೆ ವಿರುದ್ಧ ತಿರುಗಿಬಿದ್ದ ಕುಟುಂಬ

Spread the love

ಹಾಸನ : ಲೈಂಗಿಕ ದೌರ್ಜನ್ಯ ಆರೋಪ(Sexual harassment case) ವಿಚಾರದಲ್ಲಿ ಟ್ವಿಸ್ಟ್‌ ಸಿಕ್ಕಿದ್ದು ಸಂತ್ರಸ್ತೆ(Victim) ದೂರಿನ ವಿರುದ್ದ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಘೋಷ್ಟಿ ನಡೆಸಿದ ಸಂತ್ರಸ್ತೆಯ ಗಂಡನ ತಾಯಿ ಮತ್ತು ಕುಟುಂಬಸ್ಥರು, ಸಂತ್ರಸ್ತೆ ಹಾಗೂ ದೂರುದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ದೇವೇಗೌಡರು ಕುಟುಂಬದವರು ನಮಗೆ ಎಂದೂ ಮೋಸ ಮಾಡಿಲ್ಲ, ನಮಗೆ ಒಳ್ಳೆಯದನ್ನೇ ಮಾಡಿದ್ದಾರೆ, ಭವಾನಿ ಅಮ್ಮ ನಮಗೆ ತುಂಬಾ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದಾರೆ.

PRAJWAL VIDEO CASE : '5 ವರ್ಷದವರೆಗೆ ಯಾಕೆ ಬಾಯಿ ಮುಚ್ಚಿಕೊಂಡಿದ್ರು? ' ಸಂತ್ರಸ್ತೆ ವಿರುದ್ಧ ತಿರುಗಿಬಿದ್ದ ಕುಟುಂಬ

ದೂರು ನೀಡಿದ ಮಹಿಳೆ ಮೈ ತುಂಬಾ ಸಾಲ ಮಾಡಿಕೊಂಡಿದ್ದರು , ಯಾವುದೋ ಒತ್ತಡದಿಂದ ಈ ರೀತಿ ಮಾಡಿದ್ದಾರೆ. ಲೈಂಗಿಕ ದೌರ್ಜ್ಯನ್ಯ ನಡೆದಿದ್ದರೆ 5 ವರ್ಷದ ಹಿಂದೆಯೇ ಹೇಳಬೇಕಿತ್ತು . ಈಗ ಚುನಾವಣೆ ಸಮಯದಲ್ಲಿ ಗೌಡರ ಮನೆ ಹೆಸರಿಗೆ ಕಪ್ಪು ಚುಕ್ಕೆ ತರಲು ಈ ರೀತಿ ಮಾಡುತ್ತಿದ್ದಾರೆ. ಆಕೆಯ ನಡತೆಯೂ ಸರಿಯಲ್ಲ. ಆಕೆ ಹಣದ ಬೇಡಿಕೆ ಇಟ್ಟಿದ್ದಾಳೆ, ಕೊಡದಿದ್ದಾಗ ಈ ರೀತಿ ಮಾಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ನಮಗೆ ರೇವಣ್ಣ ಕುಟುಂಬ ದೇವರಿದ್ದಂತೆ, ಆ ವಿಡಿಯೋಗೂ ನಮಗೂ ಸಂಬಂಧವಿಲ್ಲ ಇದು ದುರುದ್ದೇಶದಿಂದ ಕೂಡಿದೆ ಟೆಕ್ನಾಲಜಿ ಬಳಸಿ ಏನೇನೋ ಮಾಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.


Spread the love

About Laxminews 24x7

Check Also

ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತ ಆಶ್ರಯದಲ್ಲಿ, ಅಮೃತ 2.0 ಯೋಜನೆಯಡಿಯಲ್ಲಿ,

Spread the love ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿ ಬರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶೇಡಬಾಳ ಗ್ರಾಮದ ಬಸವಣ್ಣ ದೇವಾಲಯ ಆವರಣದಲ್ಲಿ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ