Breaking News

ಚಿನ್ನದ ಬೆಲೆ ಭರ್ಜರಿ ಇಳಿಕೆ

Spread the love

ಚಿನ್ನ ಖರೀದಿ ಮಾಡಬೇಕು ಎಂದು ಕಾಯುತ್ತಿರುವ ಮಹಿಳೆಯರಿಗೆ ಹಾಗೂ ಚಿನ್ನವನ್ನು ತುಂಬಾ ಇಷ್ಟಪಡುವ ಜನರಿಗೆ ಇಲ್ಲಿದೆ ಗುಡ್‌ನ್ಯೂಸ್. ಯಾಕಂದ್ರೆ ದಿಢೀರ್ ಚಿನ್ನದ ಬೆಲೆ ಇಳಿಕೆ ಆಗಿದೆ. ಹಾಗಾದ್ರೆ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ? ಸದ್ಯ ಚಿನ್ನವನ್ನ ಖರೀದಿ ಮಾಡಬಹುದಾ?

ಬನ್ನಿ ತಿಳಿಯೋಣ.

ಏಪ್ರಿಲ್ ತಿಂಗಳಲ್ಲಿ ಚಿನ್ನಕ್ಕೆ ಭರ್ಜರಿ ಬೇಡಿಕೆ ಬಂದಿತ್ತು, ಹಾಗೇ ಭರ್ಜರಿ ಏರಿಕೆಯನ್ನ ಕೂಡ ಕಂಡಿತ್ತು ಚಿನ್ನ. ಆದ್ರೆ ಇದೀಗ ನಿಧಾನವಾಗಿ ಚಿನ್ನದ ಬೆಲೆ ಇಳಿಕೆ ಕಾಣುತ್ತಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಆಗಿದೆ. ಹೀಗಾಗಿ ಚಿನ್ನ ಖರೀದಿಗೆ ಕಾದು ಕುಳಿತಿದ್ದ ಚಿನ್ನ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಂತಾಗಿದೆ. ಹಾಗಾದ್ರೆ ಈಗ ಚಿನ್ನದ ಬೆಲೆ ಎಷ್ಟಿದೆ? ಮುಂದೆ ಓದಿ.Gold Price: ಚಿನ್ನದ ಬೆಲೆ ಭರ್ಜರಿ ಇಳಿಕೆ, ಇಲ್ಲಿದೆ ಗುಡ್ ನ್ಯೂಸ್!

ಯಾವ ನಗರದಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಅಂದಹಾಗೆ ಈಗ ಭಾರತದಲ್ಲಿ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 66,550 ರೂಪಾಯಿ ತಲುಪಿದೆ. ಹಾಗೇ 24 ಕ್ಯಾರಟ್‌ನ ಅಪರಂಜಿ ಚಿನ್ನದ ಬೆಲೆ 72,600 ರೂಪಾಯಿ ಆಗಿದೆ 100 ಗ್ರಾಂ ಬೆಳ್ಳಿ ಬೆಲೆ 8,400 ರುಪಾಯಿ ಇದೆ. ಬೆಂಗಳೂರಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 66,550 ರೂಪಾಯಿ ಆಗಿದ್ದರೆ ಬೆಳ್ಳಿಯ ಬೆಲೆ 100 ಗ್ರಾಂಗೆ 8,350 ರೂಪಾಯಿ ಆಗಿದೆ. ಅದೇ ರೀತಿ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಅಂತಾ ನೋಡೋದಾದರೆ, ಬೆಂಗಳೂರಲ್ಲಿ 66,550 ರೂಪಾಯಿ, ಚೆನ್ನೈ ನಗರದಲ್ಲಿ 67,400 ರೂಪಾಯಿ, ಮುಂಬೈನಲ್ಲಿ 66,550 ರೂಪಾಯಿ, ದೆಹಲಿ ನಗರದಲ್ಲಿ 66,700 ರೂಪಾಯಿ ಇದೆ.

ಯುದ್ಧದ ಎಫೆಕ್ಟ್ ಇದು?

ಜಾಗತಿಕವಾಗಿ ಯುದ್ಧ ಶುರುವಾದಾಗ, ಮೊದಲು ಆ ಪರಿಣಾಮ ಬೀರುವುದು ಚಿನ್ನ ಮತ್ತು ಪೆಟ್ರೋಲ್ & ಡೀಸೆಲ್ ಮೇಲೆ. ಯಾಕಂದ್ರೆ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಈ ವಸ್ತುಗಳು ದೊಡ್ಡ ಹಿಡಿತ ಹೊಂದಿವೆ. ಹೀಗಾಗಿ ಯುದ್ಧ ಶುರುವಾದ ತಕ್ಷಣ, ಚಿನ್ನದ ರೂಪಕ್ಕೆ ತಮ್ಮ ಸಂಪತ್ತು ಅಂದರೆ ಹವಣವನ್ನು ಬದಲಾಯಿಸಿ ಸಂಗ್ರಹ ಮಾಡಲು ಜನ ಮುಂದಾಗುತ್ತಾರೆ. ಹಾಗೆ ದೇಶಗಳು ಕೂಡ ಅಪಾರ ಪ್ರಮಾಣದ ಚಿನ್ನವನ್ನ ಯುದ್ಧ ಸಮಯ ಬಂದಾಗ ಖರೀದಿ ಮಾಡುತ್ತವೆ, ಏಪ್ರಿಲ್ ತಿಂಗಳಲ್ಲಿ ಕೂಡ ಅದೇ ಆಗಿತ್ತು.

ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆ ಕಾಣುತ್ತೆ ಹಾಗೇ ಷೇರು ಮಾರುಕಟ್ಟೆಯ ಇತರ ಹೂಡಿಕೆಗಳು ಕುಸಿದು ಬೀಳುತ್ತವೆ. ಹೀಗಾಗಿ ಜನ ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಇದೇ ಕಾರಣಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬರುತ್ತೆ. ಹಾಗೆ ಇನ್ನೂ ಹಲವು ಕಾರಣಗಳು ಚಿನ್ನದ ಬೆಲೆ ಏರಿಕೆಗೆ ಕಾರಣ ಆಗುತ್ತವೆ. ಈಗ ಚಿನ್ನ 75,000 ರೂಪಾಯಿ ಗಡಿ ದಾಟಿದ್ದು, ಇನ್ನೇನು 1 ಲಕ್ಷ ರೂಪಾಯಿ ಗಡಿಯನ್ನೂ ದಾಟುವ ನಿರೀಕ್ಷೆ ಇದೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ