ಹುಕ್ಕೇರಿ: ಪಟ್ಟಣದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಸಚಿವ ಸತೀಶ ಜಾರಕಿಹೊಳಿ ಪುತ್ರ, ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿ ಗುರುಶಾಂತೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧಿಪತಿ ಚಂದ್ರಶೇಖರ ಸ್ವಾಮೀಜಿ ಆಶೀರ್ವಾದ ಪಡೆದರು.
ಸಹೋದರಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ಚಲಾಯಿಸುವಂತೆ ಸಂತೆಯಲ್ಲಿ ಮತದಾರರಲ್ಲಿ ವಿನಂತಿಸಿದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಧುರೀಣ ರಿಷಭ ಪಾಟೀಲ್, ಶಾನೂಲ್ ತಹಸೀಲ್ದಾರ್, ಮಹೇಶ ಗುಮಚಿ, ವಿರೂಪಾಕ್ಷಿ ಮರೆನ್ನವರ, ಬಸವರಾಜ ರಂಗಣ್ಣವರ, ಮಂಜು ನಾಯಿಕ, ಮಲ್ಲಪ್ಪ ಗಜಬರ, ಸದಾಶಿವ್ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.
ಹುಕ್ಕೇರಿ ಹಿರೇಮಠಕ್ಕೆ ಸೋಮವಾರ ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿದರು. ಮಠಾಧ್ಯಕ್ಷ ಚಂದ್ರಶೇಖರ್ ಸ್ವಾಮೀಜಿ ರಿಷಬ್ ಪಾಟೀಲ್ ಶಾನೂಲ್ ತಹಸೀಲ್ದಾರ್ ಇದ್ದಾರೆ.
Laxmi News 24×7