Breaking News

ಬಿಸಿಯೂಟ ಸೇವನೆಗೆ ಮಕ್ಕಳ ‘ಬರ’

Spread the love

ಬೆಳಗಾವಿ: ಸಪ್ತ ನದಿಗಳು ಹರಿಯುವ ಬೆಳಗಾವಿ ಜಿಲ್ಲೆ ಈ ಬಾರಿ ಬರದಿಂದ ತತ್ತರಿಸಿದೆ. 15 ತಾಲ್ಲೂಕುಗಳನ್ನು ‘ಬರಪೀಡಿತ’ವೆಂದು ಘೋಷಿಸಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡಲಾಗುತ್ತಿದೆ. ಆದರೆ, ಸೇವನೆಗೆ ನಿರೀಕ್ಷೆಯಂತೆ ಮಕ್ಕಳೇ ಬರುತ್ತಿಲ್ಲ.

ಬೆಳಗಾವಿ: ಬಿಸಿಯೂಟ ಸೇವನೆಗೆ ಮಕ್ಕಳ 'ಬರ'

ಬರಪೀಡಿತ ತಾಲ್ಲೂಕುಗಳಲ್ಲಿ ಮಕ್ಕಳಿಗೆ ಪೌಷ್ಟಿಕಾಂಶ ಕೊರತೆ ಕಾಡದಿರಲೆಂದು ಪ್ರಧಾನಮಂತ್ರಿ ಪೋಷಣ್ ಶಕ್ತಿ-‌ನಿರ್ಮಾಣ ಯೋಜನೆಯಡಿ ಬೇಸಿಗೆ ರಜೆಯಲ್ಲೂ(ಏ.11ರಿಂದ ಮೇ 28ರವರೆಗೆ 41 ದಿನ) ಬಿಸಿಯೂಟ ಕೊಡಲಾಗುತ್ತಿದೆ. 1ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 3,17,997 ಮಕ್ಕಳು ಬಿಸಿಯೂಟ ಸೇವಿಸಲು ಒಪ್ಪಿಗೆ ಕೊಟ್ಟಿದ್ದಾರೆ‌.

ಆದರೆ, ಏಪ್ರಿಲ್‌ 16ರ ವರದಿ ಪ್ರಕಾರ, ಒಪ್ಪಿಗೆ ಕೊಟ್ಟವರಲ್ಲಿ ಶೇ 33ರಷ್ಟು ಮಕ್ಕಳಷ್ಟೇ(1,07,086) ಸೇವಿಸುತ್ತಿದ್ದಾರೆ‌. ಈ ಪೈಕಿ 1ರಿಂದ 5ನೇ ತರಗತಿಯವರು 60,880, 6ರಿಂದ 8ನೇ ತರಗತಿಯವರು 34,851 ಮತ್ತು 9ರಿಂದ 10ನೇ ತರಗತಿಯವರು 11,355 ಮಕ್ಕಳಿದ್ದಾರೆ. ಚನ್ನಮ್ಮನ ಕಿತ್ತೂರು ಮತ್ತು ಖಾನಾಪುರ ವಲಯದ ಶಾಲೆಗಳಲ್ಲಿ ಬಿಸಿಯೂಟ ಸೇವಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಾವಿರದ ಗಡಿಯನ್ನೂ ದಾಟಿಲ್ಲ.

ತಾತ್ಕಾಲಿಕ ಸ್ಥಗಿತಕ್ಕೆ ಮನವಿ: ಸಾಮಾನ್ಯ ದಿನಗಳಲ್ಲಿ ಜಿಲ್ಲೆಯಲ್ಲಿ 5.60 ಲಕ್ಷ ಮಕ್ಕಳು ಬಿಸಿಯೂಟ ಸೇವಿಸುತ್ತಿದ್ದರು. ಈಗ ಒಪ್ಪಿಗೆ ಸೂಚಿಸಿದವರಿಗಷ್ಟೇ ಬಿಸಿಯೂಟ ಕೊಡಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ 3,236 ಶಾಲೆಗಳ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟವನ್ನು ಆಯಾ ಶಾಲೆಗಳಲ್ಲೇ ತಯಾರಿಸಲಾಗುತ್ತಿದೆ. ಆದರೆ, ಕೆಲವೆಡೆ ಸೇವನೆಗೆ ಒಬ್ಬ ವಿದ್ಯಾರ್ಥಿಯೂ ಬರುತ್ತಿಲ್ಲ. ಇದರಿಂದಾಗಿ ಆಹಾರ ಮತ್ತು ಅಡುಗೆ ಸಿಬ್ಬಂದಿ ಶ್ರಮ ಎರಡೂ ವ್ಯರ್ಥವಾಗುತ್ತಿದೆ. ಹಾಗಾಗಿ ಬೇಸಿಗೆಯಲ್ಲಿ ತಾತ್ಕಾಲಿಕವಾಗಿ ಯೋಜನೆಯನ್ನೇ ಸ್ಥಗಿತಗೊಳಿಸುವಂತೆ ಕೆಲವು ಶಾಲೆಯವರು ಮನವಿ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ