Breaking News

ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

Spread the love

ಬೆಳಗಾವಿ: ಹುಬ್ಬಳ್ಳಿಯ ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣವಾಗಿದ್ದು ತಂದೆ ಬಾವಾಸಾಹೇಬ್ ಕೊಂಡುನಾಯ್ಕ ಮೇಲೆಯೂ ಹಲ್ಲೆ ಮಾಡಿದ ವಿಚಾರ ಬೆಳಕಿಗೆ ಬಂದಿದೆ.

ಆಸ್ತಿ ವಿಚಾರಕ್ಕೆ ಮೂರು ತಿಂಗಳ ಹಿಂದೆ ತಂದೆಯ ಮೇಲೆಯೇ ಹಲ್ಲೆ ಮಾಡಿದ್ದು, ಮಗನ ಕೃತ್ಯದಿಂದ ನೊಂದಿದ್ದ ತಂದೆ ಸವದತ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.ಮಗನಿಂದ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿದ್ದರು. ಬಳಿಕ ಫಯಾಜ್‌ನನ್ನು ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಬುದ್ದಿವಾದ ಹೇಳಿ ಮುಚ್ಚಳಿಕೆ ಬರೆಯಿಸಿಕೊಂಡು, ಮತ್ತೆನಾದರೂ ತಂದೆ ಮೇಲೆ ಹಲ್ಲೆ ಮಾಡಿದರೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಮುನವಳ್ಳಿಯಲ್ಲಿ ಬಾವಾಸಾಹೇಬ ಖೊಂಡುನಾಯ್ಕ ಶಿಕ್ಷಕರಾಗಿದ್ದು, ತಾಯಿ ಶಿಂದೋಗಿಯಲ್ಲಿ ಶಿಕ್ಷಕಿಯಾಗಿದ್ದಾರೆ.

 

ತಂದೆ-ತಾಯಿ ಜಗಳದ ನಡುವೆ ತಾಯಿ ಪರವಾಗಿ ನಿಂತು ಫಯಾಜ್ ಜಗಳವಾಡಿದ್ದ, ಗಂಡ ಹೆಂಡತಿ ಮಕ್ಕಳ ಜಗಳ ಎಂದು ಬುದ್ದಿವಾದ ಹೇಳಿ ಪೊಲೀಸರು ವಾಪಸ್ ಕಳುಹಿಸಿದ್ದರು.


Spread the love

About Laxminews 24x7

Check Also

ದೇವೇಗೌಡರ ಆರೋಗ್ಯ ಚೇತರಿಕೆಗಾಗಿ 108 ತೆಂಗಿನಕಾಯಿ ಒಡೆದು ಹರಕೆ ಹೊತ್ತ ಜೆಡಿಎಸ್ ಕಾರ್ಯಕರ್ತರು

Spread the love ಚಿಕ್ಕಬಳ್ಳಾಪುರ: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ