ಹೊಸದಿಲ್ಲಿ: ಮತದಾನ ಮಾಡಲು ಅರ್ಹರಾಗಿದ್ದೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ದಾನ ಮಾಡದೇ ಹೋದರೆ ಅಂಥವರ ಬ್ಯಾಂಕ್ ಖಾತೆಯಿಂದ 350 ರೂ.ಗಳನ್ನು ಕಡಿತಗೊಳಿಸಲಾಗು ವುದು! ಹೀಗೆಂದು ಹಬ್ಬಿರುವ ಸುದ್ದಿ ಕೇವಲ ವದಂತಿ ಅಷ್ಟೇ ಎಂದು ಚುನಾವಣೆ ಆಯೋಗ ಸ್ಪಷ್ಟ ಪಡಿಸಿದೆ.

ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡದಿ ದ್ದರೆ ಅಂಥವರ ಖಾತೆಯಿಂದ 350 ರೂ. ಕಡಿತಗೊ ಳಿಸಲು ನಿರ್ಧರಿಸಲಾಗಿದೆ. ಅಂಥವರ ಮೊಬೈಲ್ ರಿಚಾರ್ಜ್ ಹಣ ಕಡಿತಗೊಳಿಸಲಾಗುತ್ತದೆ ಎಂಬ ಬಗ್ಗೆ ಪತ್ರಿಕೆಯ ವರದಿ ವೈರಲ್ ಆಗಿತ್ತು. ಇದರಿಂದ ಹಲವರಿಗೆ ಆತಂಕವೂ ಮೂಡಿತ್ತು. ಅದನ್ನು ಪರಿಶೀಲಿಸಿದಾಗ ಅಂಥ ಯಾವುದೇ ವರದಿಯೂ ಪ್ರಕಟವಾಗಿಲ್ಲ. ಜತೆಗೆ ಸರಕಾರದ ವತಿಯಿಂದಲೂ ಇಂಥ ತೀರ್ಮಾನವನ್ನೂ ಕೈಗೊಳ್ಳಲಾಗಿಲ್ಲ.
Laxmi News 24×7