Breaking News

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

Spread the love

ದಾವಣಗೆರೆ: ಯಡಿಯೂರಪ್ಪ ಬಳಿಕ ರಾಜ್ಯದ ಮುಖ್ಯ ಮಂತ್ರಿ ಆಗುವ ಎಲ್ಲ ಅರ್ಹತೆ ಗಳಿದ್ದರೂ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಅವಕಾಶ ವಂಚಿಸಲಾಯಿತು. ಪಂಚಮಸಾಲಿ ಸಮು ದಾಯದವರೆಂಬ ಕಾರಣಕ್ಕಾ ಗಿಯೇ ಅವರಿಗೆ ಅವಕಾಶ ನೀಡದೆ ಮಲತಾಯಿ ಧೋರಣೆ ತೋರಲಾ ಯಿತು ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಲಿಖಿತ ಹೇಳಿಕೆ ನೀಡಿರುವ ಅವರು, ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎನ್ನುವ ತಮ್ಮ ಧ್ವನಿಯ ಹಿಂದೆ ಯತ್ನಾಳ್‌ ಅವರೂ ಇದ್ದಾರೆ. ಯತ್ನಾಳ್‌ ನಮ್ಮ ಸಮುದಾಯದ ಮತ್ತು ಬಿಜೆಪಿಯ ಹಿರಿಯ ನಾಯಕರು. ಅಟಲ್‌ ಬಿಹಾರಿ ವಾಜಪೇಯಿ ಜತೆ ಸಂಪುಟ ಸಚಿವರಾಗಿದ್ದವರು. ಇಪ್ಪತ್ತು ವರ್ಷಗಳ ಹಿಂದೆಯೇ ಕೇಂದ್ರ ನಾಯಕರಾಗಿದ್ದವರು. ಇಂದು ಅವರು ತಾಲೂಕು ಮಟ್ಟದ ನಾಯಕರಾಗಿರುವುದು ನೋವಿನ ಸಂಗತಿ ಎಂದರು.

ಯತ್ನಾಳ್‌ ಟೀಕೆ ಮುಂದುವರಿಸಲಿ
ಬಾಗಲಕೋಟೆಯಲ್ಲಿ ಲಡ್ಡು ಮುತ್ಯಾ ಎಂಬ ಮಹಾನ್‌ ಸಂತರಿದ್ದರು. ಅವರ ವಿಶೇಷತೆಯೆಂದರೆ ಅವರು ಯಾರಿಗೆಲ್ಲ ಬಯ್ಯುತ್ತಿದ್ದರೋ, ಹೊಡೆಯುತ್ತಿದ್ದರೋ ಅವರಿಗೆಲ್ಲ ಒಳ್ಳೆಯದೇ ಆಗುತ್ತಿತ್ತು. ಅದೇ ರೀತಿ ಯತ್ನಾಳ್‌ ಮುತ್ಯಾ ಅವರು ಯಾರಿಗೆಲ್ಲ ಟೀಕೆ ಟಿಪ್ಪಣಿ ಮಾಡಿದ್ದಾರೋ ಅವರೆಲ್ಲರಿಗೂ ಒಳ್ಳೆಯದೇ ಆಗಿದೆ ಎಂದು ವಚನಾನಂದ ಶ್ರೀಗಳು ತಿಳಿಸಿದ್ದಾರೆ.

ಯಡಿಯೂರಪ್ಪ, ವಿಜಯೇಂದ್ರ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಯತ್ನಾಳ್‌ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಎಲ್ಲರಿಗೂ ಒಳ್ಳೆಯ ಸ್ಥಾನಮಾನ ದೊರಕಿದೆ. ಆದ್ದರಿಂದ ಯತ್ನಾಳ್‌ ಇನ್ನೂ ಹೆಚ್ಚೆಚ್ಚು ಟೀಕೆ ಮಾಡಬೇಕು. ಅದರಿಂದ ನಮ್ಮ ಪೀಠ, ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎಂಬ ಭಾವನೆ ನಮ್ಮದಾಗಿದೆ ಎಂದಿದ್ದಾರೆ.


Spread the love

About Laxminews 24x7

Check Also

ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಇಂದು ಸಂಕೇಶ್ವರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು.

Spread the love ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಇಂದು ಸಂಕೇಶ್ವರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಲಾಯಿತು. ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ