ಕನಕಗಿರಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ರಾಂಪುರ ಗ್ರಾಮದ ಕೆರೆ ಪರಿಸರದಲ್ಲಿ ಗುರುವಾರ ವೃದ್ದರೊಬ್ಬರ ಮೇಲೆ ಕರಡಿ ದಾಳಿ ಮಾಡಿದ್ದು ಅವರು ಮೃತಪಟ್ಟಿದ್ದಾರೆ.

ಹುಡೇಜಾಲಿ ಗ್ರಾಮದ ಚೆನ್ನಪ್ಪ ಮಡಿವಾಳ (74) ಮೃತಪಟ್ಟವರು. ಕರಡಿ ವೃದ್ದನ ಕುತ್ತಿಗೆಗೆ ಬಾಯಿ ಹಾಕಿದ್ದರಿಂದ ದೇಹವೆಲ್ಲ ರಕ್ತಸಿಕ್ತವಾಗಿತ್ತುತೀವ್ರ ಗಾಯಗೊಂಡಿದ್ದ ಚೆನ್ನಪ್ಪ ಅವರನ್ನು ಕೊಪ್ಪಳದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಡಿಸೆಂಬರ್‌ನಲ್ಲಿ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ರಾತ್ರಿ ವೇಳೆಯಲ್ಲಿ ಬಂದು ಭಕ್ತರು ಮೂರ್ತಿಗೆ ಹಾಕಿದ್ದ ಎಣ್ಣೆ ನೆಕ್ಕಿತ್ತು.
Laxmi News 24×7