Breaking News

‘ಗೃಹ ಜ್ಯೋತಿ’ ಯೋಜನೆಗೆ ನೀವೂ ನೋಂದಣಿ ಆಗಿಲ್ಲವೇ? ಹಾಗಾದ್ರೆ ಅರ್ಜಿ ಸಲ್ಲಿಕೆ ಹೇಗೆ? ವಿಧಾನ, ಅರ್ಹತೆ ವಿವರ ಇಲ್ಲಿದೆ

Spread the love

ಬೆಂಗಳೂರು, ಏಪ್ರಿಲ್ 17: ಕರ್ನಾಟಕ ರಾಜ್ಯ ಕಾಂಗ್ರೆಸ್‌ ಸರ್ಕಾರವು ‘ಗೃಹ ಜ್ಯೋತಿ’ ಯೋಜನೆಯನ್ನು ಘೋಷಿಸಿತ್ತು. ಇದರಿಂದ ಪ್ರತಿ ಮನೆಗೆ ಉಚಿತ ವಿದ್ಯುತ್ ಪೂರೈಕೆಯ ಉದ್ದೇಶವನ್ನು ಹೊರ ಹಾಕಿತ್ತು. ಈ ಯೋಜನೆ ಫಲಾನುಭವಿ ಆಗಲು ಆನ್‌ಲೈನ್‌ ಮತ್ತು ಆಫ್‌ಲೈನ್ ಮೂಲಕ ನೀವು ನೋಂದಾಯಿತ ಆಗಬಹುದು.ಈವರೆಗೆ ಯಾರೆಲ್ಲ ಯೋಜನೆಗೆ ನೋಂದಣಿ ಆಗಿಲ್ಲ ಅವರು ಫಲಾನುಭವಿ ಆಗಲು ಇಲ್ಲಿನ ವಿಧಾನ, ಮಾಹಿತಿ ತಿಳಿಯಬೇಕು.

 

ಕರ್ನಾಟಕ ಸರ್ಕಾರ ನಾಗರಿಕರ ಕಲ್ಯಾಣ ಉದ್ದೇಶದಿಂದ ಉಚಿತ ವಿದ್ಯುತ್ ಯೋಜನೆ ಜಾರಿಗೆ ತಂದಿತು. ಪ್ರತಿ ಮನೆಗೆ ‘ಗೃಹ ಜ್ಯೋತಿ ಯೋಜನೆ’ ಅಡಿ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಇದರಿಂದ ಜನರ ಮಾಸಿಕ ವಿದ್ಯುತ್ ವೆಚ್ಚ ವೆಚ್ಚ ಕಡಿಮೆ ಮಾಡಲಾಗಿದೆ.

ಈ ಯೋಜೆನೆ ಜಾರಿ ಆಗುತ್ತಿದ್ದಂತೆ ಹಾಲಿ ಅಸ್ತಿತ್ವದಲ್ಲಿದ್ದ ‘ಕುಟೀರ ಜ್ಯೋತಿ, ಅಮೃತ ಜ್ಯೋತಿ ಮತ್ತು ಭಾಗ್ಯಜ್ಯೋತಿ ಯೋಜನೆಗಳು’ ಈ ಗೃಹ ಜ್ಯೋತಿ ಯೋಜನೆ ಜತೆಗೆ ವಿಲೀನಗೊಂಡಿವೆ.

ಮಾಸಿಕ 1,000 ರೂ.ವರೆಗೆ ಶುಲ್ಕ ವಿನಾಯಿತಿ

ಗೃಹ ಜ್ಯೋತಿ ಯೋಜನೆಯಡಿ ಕರ್ನಾಟಕ ನಾಗರಿಕರು ಮಾಸಿಕ 200 ಯೂನಿಟ್‌ ವರೆಗೆ ವಿದ್ಯುತ್ ಅನ್ನು ಉಚಿತವಾಗಿ ಬಳಸಬಹುದು. ಇಲ್ಲವೇ ಅವರು ಈ ಹಿಂದೆ ಕಡಿಮೆ ವಿದ್ಯುತ್ ಬಳಸುತ್ತಿದ್ದಂತೆ ಯೋಜನೆಯಡಿ ಹೆಚ್ಚುವರಿ ಶೇ.10 ರಷ್ಟು ವಿದ್ಯುತ್ ಬಳಸಬಹುದಾಗಿದೆ. ಇದು ಜನರಿಗೆ, ಬಡವರಿಗೆ ವಿದ್ಯುತ್ ಬಿಲ್ ಪಾವತಿಯಿಂದ ವಿನಾಯಿ ನೀಡಿದೆ. ಕೆಲವರೆಇಗೆ ಮಾಸಿಕ 1,000 ರೂ.ವರೆಗೆ ವಿನಾಯಿತಿ ನೀಡಿದೆ.

ರಾಜ್ಯ ಇಂಧನ ಇಲಾಖೆಯು ಗೃಹ ಜ್ಯೋತಿ ಯೋಜನೆ ಜಾರಿ ಬಳಿಕ ಪ್ರತಿದಿನ 5 ರಿಂದ 10 ಲಕ್ಷ ಅರ್ಜಿಗಳು ಬರಲಿವೆ ಎಂದು ಹೇಳಿತ್ತು. ಆದರೆ ಇನ್ನೂವರೆಗೂ ಕೆಲವು ಪ್ರದೇಶಗಳಲ್ಲಿ ಈ ಯೋಜನೆ ಪಡೆಯುವಲ್ಲಿ ವಿಫಲವಾಗಿದ್ದಾರೆ. ಇಂತವರು ಈ ಕೂಡಲೇ ಗೃಹ ಜ್ಯೋತಿ ಯೋಜನೆಗೆ ಆನ್‌ಲೈನ್ ಇಲ್ಲವೇ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ನೀವು ನೋಂದಣಿ ಆಗಿರದಿದ್ದರೆ, ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಈ ಯೋಜನೆಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಯೋಜನೆಗೆ ಆಫ್‌ಲೈನ್‌ನಲ್ಲಿ ನೋಂದಾಯಿಸಲು ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ದಾಖಲೆ ಸಮೇತ ಭೇಟಿ ನೀಡಬೇಕು.

2.14 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್

ಯೋಜನೆಯು ಮಾಸಿಕವಾಗಿ ಸರಾಸರಿ 200 ಕ್ಕಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 2.14 ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದೆ. ಉಚಿತ ವಿದ್ಯುತ್ ಪೂರೈಕೆ ಯೋಜನೆಯು ಕಳೆದ ವರ್ಷ 2023ರ ಆಗಸ್ಟ್ 1 ರಿಂದ ಜಾರಿಗೆ ಬಂತು. ನೀವು ತಿಂಗಳಿಗೆ 200 ಯೂನಿಟ್‌ಗಿಂತ ಕಡಿಮೆ ಬಳಸಿದರೆ, ನಿಮಗೆ ವಿದ್ಯುತ್ ಬಿಲ್ ಶೂನ್ಯ ಬಿಲ್ ಬರುತ್ತದೆ. ಶುಲ್ಕ ಕಟ್ಟದೇ ಉಚಿತವಾಗಿ ಬಳಕೆ ಮಾಡಬಹುದು.

ವಿದ್ಯುತ್ ಕಡಿಮೆ ಬಳಕೆದಾರರ ಗಮನಕ್ಕೆ

ಮಾಸಿಕವಾಗಿ ವಿದ್ಯುತ್ ಬಳಕೆ 200 ಯೂನಿಟ್‌ಗಿಂತ ಕಡಿಮೆ ಇದ್ದಲ್ಲಿ ಅಂತಹ ಕುಟುಂಬಗಳಿಗೆ ಉಚಿತ ವಿದ್ಯುತ್ ಸಿಗಲಿದೆ. ಒಂದು ವೇಳೆ ನೀವು ಪ್ರತಿ ತಿಂಗಳು 50 ಯೂನಿಟ್ ವಿದ್ಯುತ್ ಬಳಸುತ್ತಿದ್ದರೆ, ಯೋಜನೆ ಯಡಿ ನೋಂದಾಯಿತರಾದರೆ, ನೀವು ಮಾಸಿಕವಾಗಿ 60 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಳಸಬಹುದು ಎಂದು ಸರ್ಕಾರ ತಿಳಿಸಿದೆ.

ಉಚಿತ ವಿದ್ಯುತ್ ಪಡೆಯಲು ಯಾರು ಅರ್ಹರು?

ನೀವು ಯೋಜನೆಯ ಫಲಾನುಭವಿ ಆಗಬೇಕಾದರೆ, ಕರ್ನಾಟಕ ರಾಜ್ಯದಲ್ಲಿ ವಾಸಿಯಾಗಿರಬೇಕು. ಅಂದಾಗ ಮಾತ್ರವೇ ಅರ್ಜಿ ಸಲ್ಲಿಸಲು ನೀವು ಅರ್ಹರಾಗುತ್ತಿರಾ. ಬಳಿಕವೇ ನಿಮಗೆ ನಿಮ್ಮ ಗೃಹ/ನಿವಾಸಕ್ಕೆ ಉಚಿತ ವಿದ್ಯುತ್ ಪೂರೈಕೆ ಆಗುತ್ತದೆ. ಬಾಡಿಗೆ ಮನೆಯವರಿದ್ದರೂ ಸಹ ನೀವು ರಾಜ್ಯದವರಾಗಿದ್ದರೆ ನಿಮಗೂ ಉಚಿತ ವಿದ್ಯುತ್ ಪಡೆಯಲು ಅವಕಾಶ ಇದೆ.

ಗೃಹ ಜ್ಯೋತಿಗೆ ಅರ್ಜಿ ಸಲ್ಲಿಸುವುದು ಹೇಗೆ

ಕರ್ನಾಟಕದವರಾಗಿ ಅರ್ಹ ವ್ಯಕ್ತಿಗಳು ನೀವಾಗಿದ್ದರೆ, ಇನ್ನೂ ಯೋಜನೆಗೆ ನೋಂದಣಿ ಮಾಡಿಕೊಂಡಿಲ್ಲವಾದರೆ ಕೂಡಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ಅಂತಿಮ ದಿನಾಂಕ ಇಲ್ಲ ಎಂದು ಸರ್ಕಾರ ತಿಳಿಸಿದೆ. ಇಲ್ಲವೇ ಆಧಾರ್, ವಿದ್ಯುತ್ ಬಿಲ್ ಸಮೇತ ನೀವು ಗ್ರಾಮ ಒನ್, ಬೆಂಗಳೂರು ಒನ್‌ಗೆ ಭೇಟಿ ನೀಡಬಹುದು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ