UPSC ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯಗೆ ಗುರುವಾಗಿ ನಿಂತದ್ದು ಡಾ.ಅಶ್ವಿನಿ
ಧಾರವಾಡ: ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಲು ಕೋಚಿಂಗ್ ಸೆಂಟರ್‌ಗಳಲ್ಲಿ ಲಕ್ಷಾಂತರ ಹಣ ಸುರಿದು ತರಬೇತಿ ಪಡೆದುಕೊಳ್ಳುವುದು ಇತ್ತಿಚೆಗೆ ಅತೀಯಾಗಿ ನಡೆಯುತ್ತಿದೆ.
ಆದರೆ ಹಣ ಖರ್ಚು ಮಾಡಲು ಸಾಧ್ಯವಾಗದ, ಆದರೆ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಅವರಿಗೆ ಗುರುವಾಗಿ ಸಹಾಯ ಮಾಡಿ ಗುರಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಧಾರವಾಡದ ಕೃಷಿ ವಿವಿಯ ಪ್ರಾಧ್ಯಾಪಕಿ ಡಾ.ಅಶ್ವಿನಿ ಅವರು.
ಹೌದು.., 2023ನೇ ಸಾಲಿನ ಯಪಿಎಸ್‌ಸಿ ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಅವರ ಸಾಧನೆ ಹಿಂದೆ ಗುರುವಾಗಿ ನಿಂತವರು ಡಾ.ಅಶ್ವಿನಿ.
ಕೃಷಿ ವಿವಿ ಸೂಕ್ಷ್ಮ ಜೀವಿ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿರುವ ಅವರು, ಸ್ಪರ್ಧಾತ್ಮಕ ಪರೀಕ್ಷೆ ಓದುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಎತ್ತಿದ ಕೈ. ಸೌಭಾಗ್ಯ ಜೊತೆಗೆ ಈ ಹಿಂದೆ ೨೦೧೬ ರಲ್ಲಿ ಲಕ್ಕಪ್ಪ ಎಂಬುವವರಿಗೆ ಮಾರ್ಗದರ್ಶನ ನೀಡಿದ್ದರು. ಅವರು ಐಆರ್‌ಎಸ್ ಸೇವೆ ಪಾಸಾಗಿದ್ದರು. ಅದರಂತೆ ಮನೋಜ್ ಹೆಗಡೆ ಎಂಬುವವರು ಐಪಿಎಸ್ ಪಾಸಾಗಿದ್ದರೆ. ಇಂತಹ ಅನೇಕರು ಬೇರೆ ಬೇರೆ ಪರೀಕ್ಷೆಗಳಲ್ಲಿ ಪಾಸಾಗಿ ಇಂದು ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಧಾರವಾಡ : ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2023ನೇ ಸಾಲಿನ ಪರೀಕ್ಷೆಯಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ 101 ನೇ ರ್‍ಯಾಂಕ್ ನೊಂದಿಗೆ ಪಾಸಾಗಿ ಉತ್ತಮ ಸಾಧನೆ ಮಾಡಿದ್ದಾರೆ.
ಮೂಲತಃ ದಾವಣಗೆರೆಯ ಶರಣಯ್ಯ ಮತ್ತು ಶರಣಮ್ಮ ದಂಪತಿ ಮಗಳಾಗಿರುವ ಸೌಭಾಗ್ಯ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿ ಧಾರವಾಡದ ಪ್ರತಿಷ್ಠಿತ ಕೃಷಿ ವಿಶ್ವವಿದ್ಯಾಲಯದ 2022 ರಲ್ಲಿ ಪದವಿ ಪಡೆದುಕೊಂಡಿದ್ದರು. ನಂತರ ಡಾ.ಅಶ್ವಿನಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ಮಾಡಿಕೊಂಡಿದ್ದರು. ಪ್ರಸ್ತುತ ಅವರು ಧಾರವಾಡದಲ್ಲಿಯೇ ವಾಸವಾಗಿದ್ದಾರೆ.
ಆರು ತಿಂಗಳ ಹಿಂದೆ ಹೃದ್ರೋಗ ಖಾಯಿಲೆ ಎದುರಾದಾಗ ನನ್ನ ಮಗಳಂತೆ ಸೌಭಾಗ್ಯ ನನ್ನ ಉಪಚರಿಸಿದ್ದರು. ಅವಳಿಗೆ ಮಾರ್ಗದರ್ಶನ ನೀಡಿದ್ದಕ್ಕೆ ಸಾರ್ಥಕಭಾವ ಮೂಡಿದೆ. ಹೆಣ್ಣುಮಕ್ಕಳು ಉನ್ನತ ಹುದ್ದೆಗೆ ಏರಬೇಕು ಎನ್ನುವ ನನ್ನೊಳಗಿನ ಛಲಕ್ಕೆ ಬಲ ಬಂದಿದೆ.
-ಡಾ.ಅಶ್ವಿನಿ, ಸೌಭಾಗ್ಯ ಅವರ ಮಾರ್ಗದರ್ಶಕಿ.
ನನ್ನ ಮನೆ ಜಿಲ್ಲಾಧಿಕಾರಿ ಕಚೇರಿ ಸಮೀಪವಿತ್ತು. ನನ್ನ ತಂದೆ ಅನೇಕ ಬಾರಿ ನೀನು ಅವರಂತೆ ಜಿಲ್ಲಾಧಿಕಾರಿ ಆಗಬೇಕು. ಇದು ನನ್ನ ಕನಸು ಎನ್ನುತ್ತಿದ್ದರು. ಇಂದು ನನ್ನ ತಂದೆಯ ಕನಸು ಇಡೇರೇದೆ. ಪರೀಕ್ಷೆಯಲ್ಲಿ ೧೦೧ನೇ ರ್‍ಯಾಂಕ್ ಬಂದಿರುವುದು ನನಗೆ ಅತ್ಯಂತ ಹರ್ಷ ತಂದಿದೆ. ಕಷ್ಟಪಟ್ಟು ಓದಿದಕ್ಕೆ ಒಳ್ಳೆಯ ಫಲಿತಾಂಶ ಸಿಕ್ಕಿದೆ.
-ಸೌಭಾಗ್ಯ ಬೀಳಗಿಮಠ,