Breaking News

ಕುರಿ ಕಾಯುತ್ತಿದ್ದ ನಾನು ಸಿಎಂ ಆಗಲು ಅಂಬೇಡ್ಕರ್​ ಸಂವಿಧಾನ ಕಾರಣ: ಸಿಎಂ

Spread the love

ಮೈಸೂರು : ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹುಟ್ಟಿರದೆ ಇದ್ದರೆ ಭಾರತ ಏನಾಗಿರುತ್ತಿತ್ತು ಎನ್ನುವುದನ್ನು ಒಂದು ಕ್ಷಣ ಕಲ್ಪಿಸಿಕೊಂಡರೆ ನಮ್ಮೆಲ್ಲರ ಬದುಕಿನಲ್ಲಿ ಅವರ ಪಾತ್ರದ ಅರಿವಾಗಬಹುದು. ಈ ಕಾರಣಕ್ಕಾಗಿ ಜಾತಿ, ಧರ್ಮ, ಪಂಥ, ಪ್ರದೇಶವನ್ನು ಮೀರಿ ಭಾರತದ ನೆಲದಲ್ಲಿ ಹುಟ್ಟಿದವರು ಮತ್ತು ಹುಟ್ಟಲಿರುವವರೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಋಣಿಗಳಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅಂಬೇಡ್ಕರ್​ ಜಯಂತಿಯಂತಿಯಂದು ಅವರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ.

ಹಳ್ಳಿಯಲ್ಲಿ ಕುರಿಕಾಯುತ್ತಿದ್ದ ನಾನು ಇಂದು ರಾಜ್ಯದ ಮುಖ್ಯಮಂತ್ರಿಯಾಗಿರುವುದು ಮತ್ತು ರೈಲ್ವೆ ಸ್ಟೇಷನ್ ನಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ದಾಮೋದರದಾಸ ಮೋದಿ ಅವರು ದೇಶದ ಪ್ರಧಾನಿಯಾಗಿರುವುದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅವರು ರಚಿಸಿ ಕೊಟ್ಟಿರುವ ಸಂವಿಧಾನದ ಕಾರಣಕ್ಕೆ.

ಸಂವಿಧಾನದ ರಚನೆಯಲ್ಲಿ ಬಾಬಾಸಾಹೇಬರ ಪಾತ್ರವನ್ನು ಅವಗಣನೆ ಮಾಡುವವರು ಮತ್ತು ಸಂವಿಧಾನವನ್ನು ಬದಲಾಯಿಸಲು ಪಣತೊಟ್ಟವರು ನಿಜವಾದ ದೇಶದ್ರೋಹಿಗಳು. ಇಂತಹವರ ವಿರುದ್ಧದ ಹೋರಾಟಕ್ಕೆ ನಮಗೆ ಬಾಬಾಸಾಹೇಬರ ಚಿಂತನೆಗಳೇ ಅಸ್ತ್ರಗಳು. ಬಾಬಾ ಸಾಹೇಬರ ಜನ್ಮದಿನದ ಸಂದರ್ಭದಲ್ಲಿ ಸಂವಿಧಾನ ಉಳಿಸುವ ಪ್ರತಿಜ್ಞೆಗೈಯ್ಯೋಣ. ಸರ್ವರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು. ಎಂದು ಪೋಸ್ಟ್​ ಮಾಡಿದ್ದಾರೆ.


Spread the love

About Laxminews 24x7

Check Also

ಸಂಡೂರಲ್ಲಿ ತುಕಾರಾಂ ಪತ್ನಿ ಅನ್ನಪೂರ್ಣರಿಗೆ `ಕೈ’ ಟಿಕೆಟ್; ಸಿಎಂ

Spread the love ಮೈಸೂರು: ರಾಜ್ಯದಲ್ಲಿ ಉಪಚುನಾವಣೆಯ (By-Election) ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಒಟ್ಟು ಮೂರು ಕ್ಷೇತ್ರಗಳಿಗೆ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ