ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತಲಿನ ಕೆಲ ಗ್ರಾಮಗಳಲ್ಲಿ ಗುಡುಗು, ಜೋರಾದ ಗಾಳಿಯೊಂದಿಗೆ ಗುರುವಾರ ಮಳೆ ಸುರಿಯಿತು.
ಕಾಯ್ದ ಭೂ ತಾಯಿ ಒಡಲಿಗೆ ಏಕಾಏಕಿ ಧರೆಗಿಳಿದ ಮಳೆರಾಯ ತುಸು ತಂಪೆರೆದ. ಬಿಸಿಲಿನ ಝಳಕ್ಕೆ ಕಂಗೆಟ್ಟಿದ್ದ ಜನತೆ ಮಳೆಯ ಹನಿ ನೀರು ನೆತ್ತಿಯ ಮೇಲೆ ಬಿಳುತ್ತಿದ್ದಂತೆ ವರ್ಷಧಾರೆಗೆ ಮೈಯೊಡ್ಡಿ ಸಂಭ್ರಮಿಸಿದರು.

ಪಟ್ಟಣ ಪ್ರದೇಶದಲ್ಲಿ ತುಂತುರು ಮಳೆ ಹನಿ ಸುರಿದರೆ ಮತಕ್ಷೇತ್ರದ ಇಂಚಲ, ಹಾರೂಗೊಪ್ಪ, ಮರಕುಂಬಿ, ಮುರಗೋಡ, ಸುತ್ತಗಟ್ಟಿ ಗ್ರಾಮದಲ್ಲಿ ಜೋರಾದ ಮಳೆ ಸುರಿಯಿತು. ಮಳೆಯ ರಭಸಕ್ಕೆ ಬೀದಿಗಳು ಮಳೆ ನೀರಿನಿಂದ ತುಂಬಿ ಹರಿದವು. ಚರಂಡಿಗಳು ಉಕ್ಕಿ ತ್ಯಾಜ್ಯ ನೀರು ಹರಿದು ಹಳ್ಳ ಸೇರಿತು.
Laxmi News 24×7