ಹಾವೇರಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಎಲ್ಲಾ ಪಕ್ಷದ ನಾಯಕರುಗಳು ಅಭ್ಯರ್ಥಿಗಳು ಪರಸ್ಪರ ಟೀಕೆ ವಾಗ್ದಾಳಿ ನಡೆಸುವುದು ಸಹಜ ಇದೀಗ ರಾಜ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ್ದು ದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬರುವುದು ಚಾನ್ಸೇ ಇಲ್ಲ ಎಂದು ಭವಿಷ್ಯ ನಡೆದಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 543 ಸ್ಥಾನಗಳ ಪೈಕಿ ಕಾಂಗ್ರೆಸ್ ಸ್ಪರ್ಧಿಸಿರುವುದು 200 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನವರ ಗ್ಯಾರಂಟಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ.ಡಿಎಂಕೆ ಅಜೆಂಡಾ, ಟಿಎಂಸಿ ಅಜೆಂಡಾ, ಆಪ್ ಅಜೆಂಡಾ ಬೇರೆ. ಇವರು ಯಾರು ಗ್ಯಾರಂಟಿಗಳನ್ನು ಕೊಡುತ್ತೇವೆ ಅಂತ ಹೇಳಿಲ್ಲ.
ಕಾಂಗ್ರೆಸ್ನವರು ಮಾತ್ರ ಗ್ಯಾರಂಟಿ ಹೇಳುತ್ತಿದ್ದಾರೆ ಎಂದರುಕಾಂಗ್ರೆಸ್ನ ಗ್ಯಾರಂಟಿ ಯೋಜನೆ ಎಷ್ಟು ಜನರಿಗೆ ತಲುಪಿದೆ. ಗೃಹಲಕ್ಷ್ಮಿ ಹಣಕ್ಕಾಗಿ ತಾಯಂದಿರ ಚಪ್ಪಲಿ ಸವೆದು ಹೋಗಿದೆ.ಸೋನಿಯಾ ಗಾಂಧಿ ನಮ್ಮ ಸುತ್ತಲೂ ಕತ್ತಲೆ ಇದೆ ಎಂದಿದ್ದಾರೆ.ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲು ನಾನು ಸಿದ್ಧ ಎಂದು ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು..
Laxmi News 24×7