Breaking News

ಹುಕ್ಕೇರಿ: ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ

Spread the love

ಹುಕ್ಕೇರಿ: ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೌಕರರ ಕಾಲೊನಿ ಪಕ್ಕದ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ (ರುದ್ರಭೂಮಿ) ಜಾಗವನ್ನು ಸಮುದಾಯದ ಜನರು ಭಾನುವಾರ ಸ್ವಚ್ಛಗೊಳಿಸಿದರು.

ಬಜಾರ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಯ ಲಿಂಗಾಯತ ಒಳಪಂಗಡ ಸಮುದಾಯದ ಜನರು ಬೆಳಿಗ್ಗೆ ಸ್ಮಶಾನ ಭೂಮಿಗೆ ಬಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು.

ಹುಕ್ಕೇರಿ: ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ

ಸ್ಮಶಾನದಲ್ಲಿ ಬೆಳೆದಿದ್ದ ಮುಳ್ಳು ಕಂಟಿ, ಗಿಡಗಂಟಿ, ಹುಲ್ಲು ಸೇರಿದಂತೆ ಕುರುಚಲ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ಒಣಗಿದ ಗಿಡದ ಬೊಡ್ಡೆ ದಂಡೆಗೆ ಸಾಗಿಸುವ, ತಗ್ಗು ಪ್ರದೇಶವನ್ನು ಜೆಸಿಬಿ ಮೂಲಕ ತುಂಬುವ ಕಾರ್ಯ ಮಾಡಿದರು. ಒಣಗಿದ ಎಲ್ಲ ಗಿಡಗಂಟಿ, ಮುಳ್ಳುಕಂಟಿಗಳನ್ನು ಸುಟ್ಟು ಹಾಕಿ ಇಡೀ ಸ್ಮಶಾನ ಸ್ವಚ್ಛಗೊಳಿಸಿದರು.

ಮುಂದಿನ ದಿನಗಳಲ್ಲಿ ಸ್ಮಶಾನದಲ್ಲಿ ಬಿಲ್ವಪತ್ರಿ ಮತ್ತು ವಿವಿಧ ಹೂವು ಬಿಡುವ ಸಸಿಗಳನ್ನು ನೆಡುವುದಾಗಿ ಹಿರಿಯರು ತಿಳಿಸಿದರು. ಸೇವೆ ಸಲ್ಲಿಸಲು ಬಂದಿದ್ದ ಜನರಿಗೆ ಸಿಹಿ ಸಹಿತ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿತ್ತು.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ