Breaking News

15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿತ, ಇಂದಿನಿಂದಲೇ ಜಾರಿ

Spread the love

ಬೆಂಗಳೂರು,- ಹದಿನೈದು ವರ್ಷಗಳ ಬಳಿಕ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‍ಗಳಿಗೆ ಅನ್ವಯವಾಗಲಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‍ಸಿ) ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.22ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ 1 ರೂ.

10 ಪೈಸೆ ಕಡಿತವಾಗಲಿದೆ.

ಈ ಮೊದಲು 1ರಿಂದ 100 ರೂ. ಒಳಗಿನ ವಿದ್ಯುತ್ ದರಕ್ಕೆ 4 ರೂ.ಗಿಂತಲೂ ಹೆಚ್ಚಿನ ದರ ಇತ್ತು. 100 ರೂ. ಮೇಲ್ಪಟ್ಟ ವಿದ್ಯುತ್ ಬಳಕೆಗೆ ಶೂನ್ಯ ಯೂನಿಟ್‍ನಿಂದಲೇ 7 ರೂ. ಅನ್ವಯವಾಗುತ್ತಿತ್ತು. ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿರಲಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಹಕರಿಗೆ ವಿದ್ಯುತ್ ಶಾಕ್ ಜೋರಾಗೇ ತಗುಲಿತ್ತು.

15 ವರ್ಷಗಳ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಕಡಿತ, ಇಂದಿನಿಂದಲೇ ಜಾರಿ : ಇಲ್ಲಿದೆ ಕಂಪ್ಲೀಟ್ ಮಾಹಿತಿ

ಈ ಬಾರಿ ನಡೆದ ವಿಚಾರಣೆಯಲ್ಲಿ ಎಸ್ಕಾಂಗಳು 2024-25ನೇ ಸಾಲಿಗೆ 69,474.75 ಕೋಟಿ ರೂ.ಗಳ ವಾರ್ಷಿಕ ಕಂದಾಯದ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಇದರಿಂದ 4,863.85 ಕೋಟಿ ರೂ.ಗಳ ಕಂದಾಯ ಕೊರತೆ ಕಂಡುಬಂದಿತ್ತು. ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‍ಗೆ 49ರಿಂದ 163 ಪೈಸೆಗಳವರೆಗೆ ಸರಾಸರಿ 66 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ 64,944.54 ಕೋಟಿ ಕಂದಾಯ ಅಗತ್ಯತೆಗೆ ಅನುಮೋದನೆ ನೀಡಿದೆ.

ಇದರಿಂದ 290.76 ಕೋಟಿ ರೂ. ಕಂದಾಯ ಹೆಚ್ಚಳ ಪ್ರಸ್ತಾಪವಾಗಿದೆ. ಇದರ ಆಧಾರದ ಮೇಲೆ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಏತನೀರಾವರಿ, ಅಪಾರ್ಟ್‍ಮೆಂಟ್‍ಗಳು, ಕೈಗಾರಿಕಾ ಸ್ಥಾವರಗಳಲ್ಲಿ ವಿದ್ಯುತ್ ಬಳಕೆಯಾಗುವ ವಿದ್ಯುತ್‍ನ ದರವನ್ನು ವಿವಿಧ ಹಂತಗಳಲ್ಲಿ ಕಡಿತಗೊಳಿಸಲಾಗಿದೆ.ಪ್ರತಿ ಯೂನಿಟ್‍ಗೆ ದರ ಇಳಿಕೆಯ ಪ್ರಮಾಣ:
ಎಲ್‍ಟಿ ಗೃಹ ಬಳಕೆ 1.10 ರೂ.
ಎಚ್‍ಪಿ ವಾಣಿಜ್ಯ 1.25 ರೂ.
ಎಚ್‍ಟಿ ಕೈಗಾರಿಕೆ 50 ಪೈಸೆ
ಎಚ್‍ಟಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 40 ಪೈಸೆ
ಖಾಸಗಿ ಏತನೀರಾವರಿ 2 ರೂ.
ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 50 ಪೈಸೆ
ಕೈಗಾರಿಕಾ ಸ್ಥಾವರಗಳು 1 ರೂ.
ವಾಣಿಜ್ಯ ಸ್ಥಾವರಗಳು 50 ಪೈಸೆ
ಅಪಾರ್ಟ್‍ಮೆಂಟ್‍ಗಳು ಸೇರಿದಂತೆ ವಾಣಿಜ್ಯ, ಕೈಗಾರಿಕೆ, ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಬೇಡಿಕೆ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‍ಗೆ 10 ರೂ. ಇಳಿಸಲಾಗಿದೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ 2305 ಕಿ.ಮೀ.ಹೈವೇ ಯೋಜನೆಗಳು ಅನುಷ್ಠಾನ ಹಂತದಲ್ಲಿವೆ: ನಿತಿನ್ ಗಡ್ಕರಿ

Spread the loveನವದೆಹಲಿ, (ಆಗಸ್ಟ್ 20): ಕರ್ನಾಟಕ ರಾಜ್ಯದಲ್ಲಿ ಸುಮಾರು 48,428 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸುಮಾರು 2,305 ಕಿಲೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ