ಮುಂಬಯಿ: ಮುಂಬೈ ಇಂಡಿಯನ್ಸ್ ಸತತ ಸೋಲಿನ ಸುಳಿಗೆ ಸಿಲುಕಿರುವಂತೆಯೇ ತಂಡಕ್ಕೆ ಇನ್ನೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಆಗಮನ ಇನ್ನೂ ವಿಳಂಬವಾಗಲಿದೆ ಎಂದು ತಿಳಿದು ಬಂದಿದೆ.
ವಿಶ್ವದ ನಂ.1 ಟಿ20 ಬ್ಯಾಟರ್ ಆಗಿರುವ ಸೂರ್ಯಕುಮಾರ್ ಯಾದವ್ ನ್ಪೋರ್ಟ್ಸ್ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಸಂಪೂರ್ಣ ಚೇತರಿಕೆ ಕಂಡಿಲ್ಲ.
ಹೀಗಾಗಿ ಇವರು ಮುಂಬೈ ತಂಡ ಸೇರಿಕೊಳ್ಳುವುದು ಇನ್ನಷ್ಟು ದಿನ ವಿಳಂಬವಾಗಲಿದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ ಬಳಿಕವಷ್ಟೇ ಸೂರ್ಯಕುಮಾರ್ ಅವರಿಗೆ ಎನ್‌ಸಿಎಯಿಂದ ಸರ್ಟಿಫಿಕೆಟ್ ಲಭಿಸಲಿದೆ. ಅಲ್ಲದೇ ಇವರ ವಿಷಯದಲ್ಲಿ ಬಿಸಿಸಿಐ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ. ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾ ಪಾಲಿಗೆ ಅನಿವಾರ್ಯರಾಗಿರುವುದೇ ಇದಕ್ಕೆ ಕಾರಣ. ಅವರು ಐಪಿಎಲ್ ಆಡದಿದ್ದರೂ ಪರ್ವಾಗಿಲ್ಲ, ಆದರೆ ವಿಶ್ವಕಪ್‌ನಿಂದ ಬೇರ್ಪಡುವಂತಿಲ್ಲ ಎಂಬುದು ಬಿಸಿಸಿಐ ನಿಲುವಾಗಿದೆ ಎಂದು ತಿಳಿದು ಬಂದಿದೆ.