Breaking News

2024: 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ – ಜೆಡಿಎಸ್‌; ಇಲ್ಲಿದೆ ಸಂಪೂರ್ಣ ಪಟ್ಟಿ!

Spread the love

ಬೆಂಗಳೂರು, ಮಾರ್ಚ್‌ 28: ಕರ್ನಾಟದಕ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 25 ಹಾಗೂ ಜೆಡಿಎಸ್‌ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಕೆ ಆರಂಭಕ್ಕೂ ಮುನ್ನ ಎಲ್ಲ ಕ್ಷೇತ್ರಗಳಿಗೂ ಉಮೇದುವಾರರನ್ನು ಘೋಷಿಸಿವೆ.

ಆಡಳಿತರೂಢ ಕಾಂಗ್ರೆಸ್‌ ಇನ್ನೂ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಯನ್ನ ಘೋಷಿಸುವುದು ಬಾಕಿ ಉಳಿದಿದೆ.

ಆದರೆ, ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ಬಹುತೇಕ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಿಸಿದೆ. ಇತ್ತ ಬಿಜಪಿ ಮೊದಲ ಪಟ್ಟಿಯಲ್ಲೇ 20 ಕ್ಷೇತ್ರಗಳ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ರೆ, ನಾಲ್ಕು ಕ್ಷೇತ್ರಗಳಿಗೆ ಹಾಗೂ ಬುಧವಾರ ಒಂದು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇತ್ತ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ 7 ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಿಸಿದೆ. ಇನ್ನೂ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ 17 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದ್ದು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಕಾಂಗ್ರೆಸ್ ಬಾಕಿ ಉಳಿಸಿಕೊಂಡಿದೆ.

ಇನ್ನು ಎಲ್ಲಾರ ನಿರೀಕ್ಷೆಯಂತೆ ಹಾಸನದಿಂದ ಪ್ರಜ್ವಲ್‌ ರೇವಣ್ಣ ಅವರಿಗೆ ಟಿಕೆಟ್‌ ನೀಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಅವರು ಸ್ಪರ್ಧೆಗೆ ರೆಡಿಯಾಗಿದ್ದಾರೆ. ಇತ್ತ ಕೋಲಾರದಲ್ಲಿ ಅಭ್ಯರ್ಥಿ ಆಯ್ಕೆ ವಿಚಾರ ದಳಪತಿಗಳಿಗೆ ದೊಡ್ಡ ತಲೆ ನೋವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಬಂಗಾರಪೇಟೆಯ ಜೆಡಿಎಸ್ ಮುಖಂಡ ಮಲ್ಲೇಶ್ ಬಾಬು ಅವರನ್ನು ಕೋಲಾರದಿಂದ ಕಣಕ್ಕಿಳಿಸುವುದಾಗಿ ಹೇಳಿದ್ದರು. ಆದರೆ, ಅವರ ಬದಲಿಗೆ ನಿಸರ್ಗ ನಾರಾಯಣಸ್ವಾಮಿಯವರನ್ನು ಜೆಡಿಎಸ್ ಕಣಕ್ಕಿಳಿಸಿದೆ ಎಂದು ತಿಳಿದು ಬಂದಿದೆ. ಹಾಗಾದರೇ ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಎಂಬ 28 ಕ್ಷೇತ್ರಗಳ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.

Lok Sabha Election 2024: 28 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ - ಜೆಡಿಎಸ್‌; ಇಲ್ಲಿದೆ ಸಂಪೂರ್ಣ ಪಟ್ಟಿ!

ಬಿಜೆಪಿ-ಜೆಡಿಎಸ್‌ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

1. ಚಿಕ್ಕೋಡಿ : ಅಣ್ಣಾಸಾಹೇಬ್‌ ಜೊಲ್ಲೆ

2. ಬೆಳಗಾವಿ: ಜಗದೀಶ್‌ ಶೆಟ್ಟರ್‌

3.ಬಾಗಲಕೋಟೆ: ಪಿಸಿ ಗದ್ದಿಗೌಡರ್‌

4. ಬಿಜಾಪುರ (SC): ರಮೇಶ್‌ ಜಿಗಜಿಣಗಿ

5.ಕಲಬುರಗಿ (SC) : ಡಾ ಉಮೇಶ್‌ ಜಾಧವ್

6. ರಾಯಚೂರು: ರಾಜಾ ಅಮರೇಶ್ವರ ನಾಯಕ

7. ಬೀದರ್: ಭಗವಂತ್‌ ಖೂಬಾ

8. ಕೊಪ್ಪಳ : ಡಾ. ಬಸವರಾಜ್‌ ಕ್ಯಾವಟೂರು

9. ಬಳ್ಳಾರಿ : ಶ್ರೀರಾಮುಲು

10.ಹಾವೇರಿ ಬಸವರಾಜ ಬೊಮ್ಮಾಯಿ

11.ಧಾರವಾಡ ಪ್ರಹ್ಲಾದ್‌ ಜೋಶಿ

12. ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ

13.ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್‌

14. ಶಿವಮೊಗ್ಗ: ಬಿವೈ ರಾಘವೇಂದ್ರ

15. ಉಡುಪಿ – ಚಿಕ್ಕಮಗಳೂರು : ಕೋಟ ಶ್ರೀನಿವಾಸ್‌ ಪೂಜಾರಿ

16. ದಕ್ಷಿಣ ಕನ್ನಡ: ಕ್ಯಾ. ಬ್ರಿಜೇಶ್‌ ಚೌಟಾ

17.ಚಿತ್ರದುರ್ಗ (SC): ಗೋವಿಂದ ಕಾರಜೋಳ

18.ತುಮಕೂರು : ವಿ ಸೋಮಣ್ಣ

19.ಮೈಸೂರು: ಯದುವೀರ್‌ ಕೃಷ್ಣದತ್ತ ಚಾಮರಾಜ್‌ ಒಡೆಯರ್

20.ಚಾಮರಾಜನಗರ (SC): ಎಸ್‌ ಬಾಲರಾಜ್‌

21. ಬೆಂಗಳೂರು ಗ್ರಾಮಾಂತರ: ಡಾ ಸಿಎನ್‌ ಮಂಜುನಾಥ್‌

22. ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ

23. ಬೆಂಗಳೂರು ಕೇಂದ್ರ: ಪಿಸಿ ಮೋಹನ್

24. ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

25. ಚಿಕ್ಕಬಳ್ಳಾಪುರ: ಡಾ ಕೆ ಸುಧಾಕರ್‌

26. ಮಂಡ್ಯ: ಎಚ್‌ಡಿ ಕುಮಾರಸ್ವಾಮಿ (ಜೆಡಿಎಸ್)

27. ಹಾಸನ: ಪ್ರಜ್ವಲ್‌ ರೇವಣ್ಣ (ಜೆಡಿಎಸ್)

28. ಕೋಲಾರ (SC): ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್‌


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ