Breaking News

ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ

Spread the love

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ವರಿಷ್ಠರು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಅದು ಸಿಕ್ಕೇ ಸಿಗುತ್ತದೆ ಎಂಬ ಅತೀವ ಆತ್ಮವಿಶ್ವಾಸದಲ್ಲಿದ್ದ ಸುಮಲತಾ ಅಂಬರೀಶ್(Sumalatha Ambareesh) ಅವರಿಗೆ ಭಾರೀ ನಿರಾಸೆಯಾಗಿದೆ. ತಮ್ಮ ಮುಂದಿನ ನಡೆ ಬಗ್ಗೆ ಅವರು ಇದುವರೆಗೆ ಏನೂ ಹೇಳಿಲ್ಲ, ಅವರ ಆಪ್ತರಾಗಿರುವ ಶಶಿಕುಮಾರ್ ಹನಕೆರೆ ಮಾತಾಡಿದ್ದಾರೆ.

ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅವರು ಬಿಜೆಪಿಗೆ ಬೇಷರತ್ ಬೆಂಬಲ (unconditional support) ಘೋಷಿಸಿದಾಗ ಜೆಡಿಎಸ್ ಪಕ್ಷವು ಎನ್ ಡಿಎ ಮೈತ್ರಿಕೂಟದ ಭಾಗವಾಗಿರಲಿಲ್ಲ.

ಬಿಜೆಪಿ ನಾಯಕರಿಗೆ ಪಕ್ಷವನ್ನು ಹಳೇ ಮೈಸೂರು ಭಾಗದಲ್ಲಿ ಬಲಿಷ್ಠವಾಗಿ ಬೆಳೆಸುವ ಆಸೆ ಇದ್ದು ಸುಮಲತಾ ಅವರ ಮೂಲಕ ಆ ಕಾರ್ಯ ಸಾಧಿಸುತ್ತಾರೆ ಅಂತ ಭಾವಿಸಲಾಗಿತ್ತು. ಅದರೆ ಬಿಜೆಪಿ ವರಿಷ್ಠರು ಸುಮಲತಾ ಅವರಿಗೆ ಟಿಕೆಟ್ ನಿರಾಕರಿಸುವ ನಿರ್ಧಾರ ಯಾಕೆ ತೆಗೆದುಕೊಂಡರೋ ಅರ್ಥವಾಗುತ್ತಿಲ್ಲ ಎಂದು ಹನಕೆರೆ ಹೇಳಿದರು.

ಬಿಜೆಪಿ ಮತ್ತು ಸುಮಲತಾ ಪರವಾಗಿ ಕೆಲಸ ಮಾಡಲು ಉತ್ಸುಕರಾಗಿದ್ದ ಎರಡೂ ಪಕ್ಷಗಳ ಕಾರ್ಯಕರ್ತರು ತೀವ್ರವಾಗಿ ನೊಂದುಕೊಂಡಿದ್ದಾರೆ, ಬಿಜೆಪಿ ವರಿಷ್ಠರ ನಿರ್ಧಾರ ಅವರಲ್ಲಿ ನೋವುಂಟು ಮಾಡಿದೆ.

ಇದೇ ಹಿನ್ನೆಲೆಯಲ್ಲಿ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರೆಲ್ಲ ಸುಮಲತಾ ಅವರನ್ನು ಆಗ್ರಹಿಸುತ್ತಿದ್ದೇವೆ.

ಗೆಲ್ಲುವ ಅತ್ಯುತ್ತಮ ಅವಕಾಶವಿರುವುದರಿಂದ ಅವರು ಸ್ಪರ್ಧಿಸಲೇ ಬೇಕು ಎಂದು ಹೇಳಿದ ಹನಕೆರೆ, ಸುಮಲತಾ ಮಾಡಿರುವ ಸಾಧನೆಗಳು ಒಂದೆರಡಲ್ಲ ಹಾಗಾಗಿ, ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೆಲ್ಲ ಸಭೆ ನಡೆಸಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಆಗ್ರಹಿಸುತ್ತೇವೆ ಎಂದರು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ