Breaking News

ದಾಖಲೆ ಮಟ್ಟಕ್ಕೆ ಮಾರಾಟವಾದ ಬೆಳಗಾವಿ ರೈತ ಬೆಳೆದ ಅರಿಶಿಣ

Spread the love

ಬೆಳಗಾವಿ, ಮಾರ್ಚ್ 22: ಈ ಬಾರಿ ರಾಜ್ಯದಲ್ಲಿ ಎದುರಾದ ಬರಗಾಲ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಬೆಳೆಗೆ ನೀರಿಲ್ಲ, ಏನೇ ಮಾಡಿದರು ಉತ್ತಮ ಗುಣಮಟ್ಟದ ಬೆಳೆ ಸಿಗುತ್ತಿಲ್ಲ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಈ ಎಲ್ಲಾ ಕಾರಣಗಳಿಂದ ರೈತರು ಹೈರಾಣಾಗಿ ಹೋಗಿದ್ದಾರೆ.ಆದರೆ ಈ ಎಲ್ಲಾ ಗೋಳಾಟಗಳ ನಡುವೆ ಇಲ್ಲೊಬ್ಬ ರೈತ ತಾವು ಬೆಳೆದ ಬೆಳೆಗೆ ನಿರೀಕ್ಷೆಗೂ ಮೀರಿದ ಲಾಭ ಗಳಿಸಿ ನೆಮ್ಮದಿಯ ನಗು ಬೀರಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ರೈತನೊಬ್ಬ ಬೆಳೆದ ಅರಿಶಿಣ ಇಡೀ ಭಾರತದಲ್ಲಿ ದಾಖಲೆ ಮಟ್ಟಕ್ಕೆ ಮಾರಾಟವಾಗಿ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಕೋಹಳ್ಳಿ ಗ್ರಾಮದ ರೈತ ಸೈಬಣ್ಣ ಭೂಪತಿ ಪೂಜಾರಿ ಅವರ ಅರಿಶಿನ ಭಾರತದಲ್ಲಿ ಅಚ್ಚರಿಯ ದರಕ್ಕೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್​ಗೆ ಬರೋಬ್ಬರಿ 41,101 ರೂಪಾಯಿಯ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ರೈತ ಸೈಬಣ್ಣ ಭೂಪತಿ ಪೂಜಾರಿ ಶೈಲಂ ತಳಿಯ ಅರಿಶಿನ ಬಿಜ ನಾಟಿ ಮಾಡಿ ಉತ್ತಮ ಇಳುವರಿ ಪಡೆದಿದ್ದಾರೆ.

ಈಗಾಗಲೇ 18 ಕ್ವಿಂಟಲ್ ಅರಿಶಿನ ಮಾರಾಟವಾಗಿದ್ದು 7ಲಕ್ಷ ರೂ. ನಿವ್ವಳ ಲಾಭ ಪಡೆದಿದ್ದಾರೆ. ಪ್ರತಿ ಎಕ್ಕರೆಗೆ 30 ಸಾವಿರ ಖರ್ಚು ಮಾಡಿದ ಇವರು ಮೂರು ಎಕ್ಕರೆ ಅರಿಶಿನದಿಂದ ಅಂದಾಜು 30 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದಾರೆ.25 ಸಾವಿರ ರೂಪಾಯಿಗೆ ಅರಶಿನ ಮಾರಾಟ ಮಾಡಿದ ಭರಮನಕೊಡಿ ರೈತರಾಜ್ಯಾದ್ಯಂತ ದಟ್ಟವಾದ ಬರಗಾಲದ, ಇಂತಹದರಲ್ಲಿ ಅರಿಶಿನ ಬೆಳೆ ಬೆಳೆದು ಮಾದರಿಯಾಗಿದ್ದು ಶ್ಲಾಘನೀಯವಾಗಿದೆ. ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಅರಿಶಿನ ಬೆಳೆಯಲಾಗುತ್ತದೆ.

ಇದೀಗ ಅರಿಶಿನಕ್ಕೆ ಚಿನ್ನದ ದರ ಕಂಡ ರೈತರು ಫುಲ್ ಖುಷಿಯಾಗಿದ್ದಾರೆ.ಚಿಕ್ಕಬಳ್ಳಾಪುರ ವಿದ್ಯುತ್ ಕಣ್ಣಾಮುಚ್ಚಾಲೆ: ನೀರಿಲ್ಲದೆ ಒಣಗುತ್ತಿದೆ ಬೆಳೆ, ಲಕ್ಷಾಂತರ ರೂಪಾಯಿ ಬಂಡವಾಳ ವ್ಯರ್ಥ- ರೈತ ಕಂಗಾಲು ಈ ವರ್ಷ ಅರಿಶಿನ ಎರಡು ದಶಕಗಳಲ್ಲಿ ಇಲ್ಲದ ಇತಿಹಾಸ ಸೃಷ್ಟಿಸಿದೆ. ರೈತರ ನಿರೀಕ್ಷೆಗೂ ಮೀರಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಪ್ರತಿವರ್ಷ ಕೇವಲ ಐದರಿಂದ ಆರು ಸಾವಿರ ದರಕ್ಕೆ ಮಾರಾಟವಾಗುತ್ತಿದ್ದ ಅರಿಶಿನ, ಈ ವರ್ಷ ಕ್ವಿಂಟಾಲ್‍ಗೆ ಬರೋಬ್ಬರಿ 25 ಸಾವಿರ ರೂಪಾಯಿ ದಾಖಲೆ ಮೊತ್ತಕ್ಕೆ ಮಾರಾಟವಾಗಿದೆ. ಅದಕ್ಕೆ ಬೆಳಗಾವಿ ರೈತರು ಖುಷಿಯಾಗಿದ್ದಾರೆ.


Spread the love

About Laxminews 24x7

Check Also

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ…

Spread the love ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೀರಜ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ… – ಸಾಂಗ್ಲಿ ಜಿಲ್ಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ