ಧಾರವಾಡ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ (ನಿಪ್ಪಾಣಿ-ಗಂಗಾವತಿ) ಒಯ್ಯುತ್ತಿದ್ದ 776 ಗ್ರಾಂ ( ₹ 38.5 ಲಕ್ಷ) ಚಿನ್ನಾಭರಣಗಳನ್ನು ತೇಗೂರು ಚೆಕ್ ಪೋಸ್ಟ್ ಸಿಬ್ಬಂದಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಚೆಕ್‌ಪೋಸ್ಟ್‌ನಲ್ಲಿ ಗುರುವಾರ ರಾತ್ರಿ 11.30 ವೇಳೆಯಲ್ಲಿ ಸಿಬ್ಬಂದಿ ಬಸ್ ತಪಾಸಣೆ ಮಾಡಿದಾಗ ಚಿನ್ನಾಭರಣ ಸಿಕ್ಕಿವೆ.

ಮಹಾರಾಷ್ಟ್ರ ಕೊಲ್ಲಾಪುರದ ಪ್ರಕಾಶಕುಮಾರ ಹುಕುಮಜಿ ಮಾಲಿ ಅವರು ಚಿನ್ನದ ಸರ, ಗುಂಡು, ಲಾಕೆಟ್‌ಗಳನ್ನು ಬಸ್‌ನಲ್ಲಿ ಸಿಂಧನೂರಿಗೆ ಒಯ್ಯುತ್ತಿದ್ದರು. ಅವರು ತೋರಿಸಿದ ಆಭರಣ ಖರೀದಿ ಬಿಲ್‍ಗಳಲ್ಲಿ ನಮೂದಾಗಿರುವ ತೂಕ ಮತ್ತು ತಪಾಸಣೆ ವೇಳೆ ಸಿಕ್ಕಿರುವ ಆಭರಣಗಳ ತೂಕಕ್ಕೂ ವ್ಯತ್ಯಾಸ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.
ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7