ನವದೆಹಲಿ: ಪಕ್ಷದ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿರುವುದಕ್ಕೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ಜೆಪಿ ನಡ್ಡಾ, ಕಾಂಗ್ರೆಸ್ ನ್ನು ಜನ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ತಿರಸ್ಕರಿಸಲಿದ್ದಾರೆ ಹಾಗೂ ಐತಿಹಾಸಿಕ ಸೋಲನ್ನು ಎದುರಿಸುವ ಭಯದಿಂದ ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಭಾರತದ ಪ್ರಜಾಪ್ರಭುತ್ವ ಹಾಗೂ ಸಂಸ್ಥೆಗಳ ಬಗ್ಗೆ ಮನಸೋ ಇಚ್ಛೆ ಮಾತನಾಡಿದ್ದಾರೆ, ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯನ್ನು ಆರ್ಥಿಕ ಸಂಕಷ್ಟದ ಮೇಲೆ ದೂರುತ್ತಿದ್ದಾರೆ ಎಂದು ಜೆಪಿ ನಡ್ಡಾ ಟ್ವಿಟರ್ ನಲ್ಲಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಗೆ ಎದುರಾಗಿರುವುದು ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಆರ್ಥಿಕ ದಿವಾಳಿತನವಲ್ಲ ಎಂದು ಜೆಪಿ ನಡ್ಡಾ ಹೇಳಿದ್ದಾರೆ. ಅವರ ಪೋಸ್ಟ್, “ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲು, ಕಾಂಗ್ರೆಸ್ ತಮ್ಮ ತೊಂದರೆಗಳಿಗೆ ಅಧಿಕಾರಿಗಳನ್ನು ದೂಷಿಸುತ್ತಿದೆ. ಅದು ಐಟಿಎಟಿ ಅಥವಾ ದೆಹಲಿ ಹೈಕೋರ್ಟ್ ಆಗಿರಲಿ, ಅವರು ಕಾಂಗ್ರೆಸ್ ಅನ್ನು ನಿಯಮಗಳನ್ನು ಅನುಸರಿಸಲು, ಬಾಕಿ ತೆರಿಗೆ ಪಾವತಿಸಲು ಕೇಳಿದ್ದಾರೆ ಆದರೆ ಪಕ್ಷವು ಹಾಗೆ ಮಾಡಲಿಲ್ಲ.