ಕೊಪ್ಪಳ : ಮುಂದಿನ ರಾಜಕೀಯ ನಿರ್ಧಾರಕ್ಕೆ ಗುರುವಾರ ಮಾ 21 ರಂದು ನಿರ್ಧಾರ ಮಾಡುತ್ತೇನೆ. ಅಂದು ಬೆಂಬಲಿಗರ ಸಭೆ ಕರೆದಿರುವೆ. ಬೆಂಬಲುಗರ ಸಭೆಯ ನಂತರ ಮುಂದಿನ ರಾಜಕೀಯ ನಡೆಯ ಬಗ್ಗೆ ನಿರ್ಧಾರ ಮಾಡುತ್ತೇನೆ ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಸದ ಸಂಗಣ್ಣ ಕರಡಿ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಡಾ ಬಸವರಾಜ ಅವರಿಗೆ ಘೋಷಣೆಯಾಗಿದೆ.ಅವರಿಗೆ ಶುಭ ಕೋರುತ್ತೇನೆ. ನನಗೆ 8 ವಿಧಾನ ಸಭಾ ಕ್ಷೇತ್ರದ ಮುಖಂಡರು ಅನ್ಯಾಯವಾಗಿದೆ ಎನ್ನುತ್ತಿದ್ದಾರೆ. ಎಲ್ಲಾ ಕಡೆಯಿಂದಲೂ ಒಂದೇ ಕೂಗು ಅನ್ಯಾಯವಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡರು ಮಾತನಾಡಿದ್ದಾರೆ. ರಾಜ್ಯ ನಾಯಕರು ಸೌಜನ್ಯಕ್ಕೂ ಮಾತನಾಡಿಲ್ಲ. ಈಗ ವಿಜಯೇಂದ್ರ ಮಾತನಾಡಿದರು. ನಾನು ಕೇಳಿದ ಮೂರು ಪ್ರಶ್ನೆಗೆ ಉತ್ತರವಿಲ್ಲ ಎಂದರು.