ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ (Lokasabha Election 2024) ಬಿಜೆಪಿಯು (BJP) ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಅಂತಿಮ ಪಟ್ಟಿ ಸಿದ್ದವಾಗಿದೆ. ಉತ್ತರ ಕನ್ನಡ, ಬೆಳಗಾವಿ, ರಾಯಚೂರು, ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಇಂದು ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದ್ದು, ದೆಹಲಿ ವರಿಷ್ಠರ ಭೇಟಿಗೆ ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ದೌಡಾಯಿಸಿದ್ದಾರೆ.
ಉತ್ತರ ಕನ್ನಡ – ಅನಂತ ಕುಮಾರ್, ಬೆಳಗಾವಿ – ಜಗದೀಶ್ ಶೆಟ್ಟರ್, ರಾಯಚೂರು – ಬಿ.ವಿ.ನಾಯಕ್, ಚಿತ್ರದುರ್ಗ – ಜೆ. ಜನಾರ್ಧನ ಸ್ವಾಮಿ / ಆನೇಕಲ್ ನಾರಾಯಣ ಸ್ವಾಮಿ, ಚಿಕ್ಕಬಳ್ಳಾಪುರ – ಡಾ. ಕೆ .ಸುಧಾಕರ್ / ಅಲೋಕ್ ವಿಶ್ವನಾಥ್ ಹೆಸರು ಪಟ್ಟಿಯಲ್ಲಿದೆ .
ದೆಹಲಿಗೆ ತೆರಳುವ ಮುನ್ನ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್‌ವಾಲ್, ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಹೈವೋಲ್ಟೇಜ್ ಮೀಟಿಂಗ್ ನಡೆಸಿದ್ದಾರೆ.
Laxmi News 24×7