ಬೆಂಗಳೂರು ಗ್ರಾಮಾಂತರ, ಮಾ.15: ಆನೇಕಲ್(Anekal) ತಾಲ್ಲೂಕಿನ ಮಹಾಂತಲಿಂಗಾಪುರದಲ್ಲಿ ಸರ್ವೆ ನಂ. 48 ರ ಸರ್ಕಾರಿ ಗೋಮಾಳ ಜಾಗವಿದೆ.ಕೋಟ್ಯಾಂತರ ರೂಪಾಯಿಬೆಲೆ ಬಾಳುವ ಇದೇ ಸರ್ಕಾರಿ ಗೋಮಾಳ ಜಾಗವನ್ನ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ತಾಲ್ಲೂಕಿನ ಮೈಲಸಂದ್ರ ವಾಸಿ ನಾರಾಯಣಸ್ವಾಮಿ ಮತ್ತು ಕಾಂತಮ್ಮ ಎಂಬುವವರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಮಾರಾಟ, ವಂಚನೆ ಮತ್ತು ಕ್ರಿಮಿನಲ್ ಅಫೆನ್ಸ್ ಸೇರಿದಂತೆ ಆರೋಪಿಗಳ ವಿರುದ್ಧ IPC 1869 U/S 36, 406, 420, 447, 468,470,471,472,473,474 ಮತ್ತು 464 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ಸಹಿ ಹಾಕಿ ವಂಚನೆ
ಅಮಾಯಕ ಗ್ರಾಹಕರಿಗೆ ವಂಚನೆ ಮಾಡುವ ಸಲುವಾಗಿ ಕಲ್ಲುಬಾಳು ಗ್ರಾಮ ಪಂಚಾಯತಿ ಅಧಿಕಾರಿಗಳು ದೃಢೀಕರಿಸಿದಂತೆ ನಕಲಿ ಸಹಿ ಮತ್ತು ಸೀಲು ಹಾಕಿ ಪಾರಂ 9 ಮತ್ತು 10 ಪತ್ರ ತಯಾರಿಸಿದ್ದಾರೆ. ಬಳಿಕ ಕಡಿಮೆ ಬೆಲೆಗೆ ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿದ ಅಸಾಮಿಗಳು ಫೋಡಿ, ಕನ್ವರ್ಷನ್, ಪ್ಲಾನ್ ಅಪ್ರೂವಲ್ ಮತ್ತು ಪಂಚಾಯತಿ ಇ-ಖಾತಾ ಇಲ್ಲದಿದ್ದರೂ ಸುಮಾರು 2 ಎಕರೆ ಪ್ರದೇಶದಲ್ಲಿ 60 ಕ್ಕೂ ಅಧಿಕ ಮಂದಿಗೆ ನಿವೇಶನ ಮಾರಾಟ ಮಾಡಿ ವಂಚಿಸಿದ್ದಾರೆ.