ಚಿಕ್ಕೋಡಿ: ಹತ್ತಾರು ಮರಗಳ ಮಾರಣ ಹೋಮ ಮಾಡಿದ ಪುರಸಭೆ : ಪರಿಸರ ಪ್ರೇಮಿ ಸಂತೋಷ್ ಅರಬಾವಿಗೆ ಮಣಿದ ಸ್ಥಳೀಯ ಆಡಳಿತ
ಹೌದು ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಮುಗಳಖೋಡ ಪುರಸಭೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ
ನಿನ್ನೆ ಮದ್ಯಾನ ಸುಮಾರು 3 ಗಂಟೆಗೆ ಚರಂಡಿ ಸ್ವಚ್ಛತಾ ಕಾರ್ಯಕ್ಕೆ ಆಡ್ಡಿಯಾಗುತ್ತವೆ ಎಂಬ ನೇಪಯೋಡ್ಡಿ ಹತ್ತಾರು ಮರಗಳನ್ನು ಜೆಸಿಬಿ ಮೂಲಕ ನೆಲಕ್ಕುರಲಿಸಿದ ಘಟನೆ ನಡೆದಿದೆ
ಯಾವದೇ ಪರವಾನಿಗೆ ಇಲ್ಲದೆ ಹತ್ತಾರು ವರ್ಷದ ನೆರಳು ಹಾಗೂ ಹಣ್ಣು ಕೊಡುವ ಮರಗಳನ್ನು ಬೇರು ಸಮೇತ ಕಿತ್ತು ಹಾಕಿದ್ದಾರೆ, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಾಮಾಜಿಕ ಹೋರಾಟಗಾರ ಸಂತೋಷ್ ಅರಭಾವಿ ಮರಗಳ ಮಾರಣ ಹೋಮ ನೋಡಿ ಕಣ್ಣೀರು ಹಾಕಿ, ಅಧಿಕಾರಿಗಳ ಹಾಗೂ ಪುರಸಭೆ ವಿರುದ್ಧ ಕಿಡಿ ಕಾರಿದರು
ಚರಂಡಿ ಸ್ವಚ್ಛತೆ ಕಾರ್ಯಕ್ಕೆ ಅನುಕೂಲ ಇಲ್ಲಾ ಅಂತೇಳಿ ಹತ್ತಾರು ವರ್ಷದ ಬ್ರಹತ್ ಮರಗಳನ್ನೇ ಕಡಿದಿದ್ದಾರೆ ಮರಗಳನ್ನು ಕಡಿಯದೆ ಅನೇಕ ತಂತ್ರಜ್ಞಾನಯುತ ಉಪಕರಣ ಬಳಸಿ ಚರಂಡಿ ಸ್ವಚ್ಛ ಮಾಡಬಹುದಿತ್ತು, ಇಂತಹ ಬಿರು ಬೇಸಿಗೆಯಲ್ಲಿ ನೆರಳು ಹಾಗೂ ಹಣ್ಣು ಕೊಡುವ ಮರಗಳ ಜೀವ ತಗೆದಿದ್ದಾರೆ ಇವರಿಗೆ ಮನುಷ್ಯತ್ವ ಇಲ್ಲವೇ ಎಂದು ಹರಿಹಾದೀದ್ದಾರೆ,
ಯಾವದೇ ಪರವಾನಿಗೆ ಇಲ್ಲದೆ ಮರಗಳನ್ನು ಕಡಿದವರ ವಿರುದ್ದ ಹಾಗೂ ಸಹಕರಿಸಿದ ಅಧಿಕಾರಿ ಹಾಗೂ ಜನಪ್ರತಿನಿದಿಗಳ ವಿರುದ್ಧ ಶಿಸ್ತುಬದ್ದ ಕ್ರಮ ಜರುಗಿಸಬೇಕು ಹಾಗೂ ಮರಗಳನ್ನು ನಾಶಮಾಡಿದ ಜಾಗದಲ್ಲೇ ಪುರಸಭೆ ಮುಖ್ಯಧಿಕಾರಿ ಹೊಸ ಸಸಿಗಳನ್ನು ನೆಡುವವರೆಗೂ ಜಾಗ ಬಿಟ್ಟು ಕದಲದ ಸಂತೋಷ್ ಅವರನ್ನು ಅನೇಕ ಪುರಸಭೆ ಸದಸ್ಯರು ಮನವೊಲಿಸಲು ಪ್ರಯತ್ನ ಮಾಡಿದರು ಪ್ರಯೋಜನವಾಗಲಿಲ್ಲ