Breaking News

ಬಸ್​ನಿಂದ ಆಯತಪ್ಪಿ ಬಿದ್ದು ಮೃತಪಟ್ಟ ನಿರ್ವಾಹಕ 

Spread the love

ಮೈಸೂರು, ಮಾರ್ಚ್​ 09: ಚಲಿಸುತ್ತಿದ್ದ ಕೆಎಸ್​​ಆರ್​ಟಿಸಿ  ಬಸ್​ನಿಂದ ಆಯತಪ್ಪಿ ಬಿದ್ದು ನಿರ್ವಾಹಕ  ಮೃತಪಟ್ಟಿರುವ ಘಟನೆ ನಂಜನಗೂಡು  ತಾಲೂಕಿನ ಮಲ್ಲನಮೂಲೆ ಮಠದ ಬಳಿ ನಡೆದಿದೆ.

ಚಾಮರಾಜನಗರ (Chamarajanagar) ತಾಲೂಕಿನ ಹಳೇಪುರ ನಿವಾಸಿ ಮಹದೇವಸ್ವಾಮಿ (35) ಮೃತ ನಿರ್ವಾಹಕ. ನಿರ್ವಾಹಕ ಮಹದೇವಸ್ವಾಮಿ ಕೆಎಸ್​ಆರ್​ಟಿಸಿ ಬಸ್​ನ ಫುಟ್​ ಬೋರ್ಡ್​​ನಲ್ಲಿ ನಿಂತಿದ್ದರು.

ಈ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಂಜನಗೂಡು ಡಿವೈಎಸ್​​ಪಿ ರಘು, ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ. ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

Spread the loveಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ