Breaking News

ಸ್ಫೋಟ ಸಂಭವಿಸಿ ವಾರದ ನಂತರ ರಾಮೇಶ್ವರಂ ಕೆಫೆ ಪುನರಾರಂಭ

Spread the love

ಬೆಂಗಳೂರು, ಮಾರ್ಚ್​​ 8: ಬಾಂಬ್ ಸ್ಫೋಟ (Bomb Blast) ಸಂಭವಿಸಿದ ನಂತರ ವಾರದ ಬಳಿಕ ಇದೀಗ ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಮತ್ತೆ ಕಾರ್ಯಾರಂಭ ಮಾಡಿದೆ.

ಶಿವರಾತ್ರಿ (Maha Shivratri) ದಿನವೇ ಕೆಫೆ ಪುನರಾರಂಭ ಮಾಡುವುದಾಗಿ ಮ್ಯಾನೇಜ್​​ಮೆಂಟ್ ಈಗಾಗಲೇ ತಿಳಿಸಿತ್ತು. ಅದರಂತೆ ಶುಕ್ರವಾರ ಬೆಳಿಗ್ಗೆಯೇ ಕೆಫೆ ಪುನರಾರಂಭ ಮಾಡಿದೆ.

 

ಬೆಂಗಳೂರು: ಸ್ಫೋಟ ಸಂಭವಿಸಿ ವಾರದ ನಂತರ ರಾಮೇಶ್ವರಂ ಕೆಫೆ ಪುನರಾರಂಭ

ಕೆಫೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ನೆರವೇರಿದವು. ಆ ಮೂಲಕ ಮತ್ತೆ ಗ್ರಾಹಕರಿಗೆ ಕೆಫೆ ಮುಕ್ತವಾಗಿದೆ.

ಹೇಗಿದೆ ಭದ್ರತಾ ವ್ಯವಸ್ಥೆ?

ಬಾಂಬ್ ಸ್ಫೋಟದ ಘಟನೆಯಿಂದ ಎಚ್ಚೆತ್ತುಕೊಂಡಿರುವ ರಾಮೇಶ್ವರಂ ಕೆಫೆ ಇದೀಗ ಪುನರಾರಂಭದ ವೇಳೆ ಸೂಕ್ತ ಮುನ್ನೆಚ್ಚರಿಕೆ, ಭದ್ರತಾ ಕ್ರಮಗಳನ್ನು ಕೈಗೊಂಡಿದೆ.

ಕೆಫೆಯ ಪ್ರವೇಶ ದ್ವಾರದ ಬಳಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಶನಿವಾರದಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.

ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್​ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಪಹರೆಯಲ್ಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು.


Spread the love

About Laxminews 24x7

Check Also

ಬೆಂಗಳೂರಿನಲ್ಲಿ ಮಳೆ ಅವಾಂತರ

Spread the love(ಬೆಂಗಳೂರು): ಕಟ್ಟಡ ನಿರ್ಮಾಣಕ್ಕಾಗಿ ಪಾಯ ಅಗೆಯುತ್ತಿದ್ದ ವೇಳೆ ಮಳೆ ನೀರು ಪಾಯಕ್ಕೆ ನುಗ್ಗಿ ಪಾಯದಲ್ಲಿನ ಮಣ್ಣು ಕುಸಿದು ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ