ಬೆಳಗಾವಿ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ದಲಿತ ಮುಖ್ಯಮಂತ್ರಿಗಾಗಿ (Dalit CM) ಬೇಡಿಕೆ ಇಂದು ನಿನ್ನೆಯದಲ್ಲ, ದಶಕಗಳಿಂದ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ಈ ವಿಷಯದಲ್ಲಿ ತಮ್ಮ ಪಕ್ಷ 99 ರವರೆಗೆ ಬಂದು ಔಟಾಗಿಬಿಡುತ್ತದೆ, ಸೆಂಚುರಿ (century) ಬಾರಿಸಲ್ಲ ಎಂದು ನಗುತ್ತಾ ಹೇಳಿದರು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಆಕಾಂಕ್ಷೆಯನ್ನು ಮತ್ತೊಮ್ಮೆ ತೇಲಿಬಿಟ್ಟಿರುವುದರಿಂದ ದಲಿತ ಸಿಎಂ ವಿಷಯವನ್ನು ಮುನ್ನೆಲೆಗೆ ತರಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಅದಕ್ಕೂ ಇದಕ್ಕೂ ಸಂಬಂಧವಿಲ್ಲ,
ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 20-25 ವರ್ಷಗಳಿಂದ ಮುಖ್ಯಮಂತ್ರಿಯಾಗುವ ಕನಸು ಹೊತ್ತಿದ್ದಾರೆ, ಈ ವಿಷಯವೇ ಬೇರೆ ಎಂದು ಸಚಿವ ಹೇಳಿದರು.
ಆದರೆ ಇದು ಕಾಂಗ್ರೆಸ್ ಪಕ್ಷಕ್ಕೆ ಚುನಾವಣಾ ವಿಷಯವಲ್ಲ ಮತ್ತು ಚುನಾವಣಾ ಸಮಯದಲ್ಲಿ ಇದನ್ನು ಪ್ರಸ್ತಾಪಿಸಬಾರದಿತ್ತು ಎಂದ ಅವರು ರಾಜಕೀಯದಲ್ಲಿ ಕುತಂತ್ರ ಹೊಸದಲ್ಲ, ಅಸಲಿಗೆ ರಾಜಕೀಯವೆಂದರೆ ಕುತಂತ್ರ, ಒಬ್ಬರು ಮತ್ತೊಬ್ಬರನ್ನು ತುಳಿಯುವುದು ಎಲ್ಲ ಪಕ್ಷಗಳಲ್ಲಿ ನಡೆಯುತ್ತದೆ ಅಂತ ಹೇಳಿದರು.