ಬೆಂಗಳೂರು, ಫೆಬ್ರವರಿ 29: ಮಹಿಳಾ ಐಪಿಎಲ್ ಶುರು ಬೆನ್ನಲ್ಲೆ ರೌಡಿಗಳ(rowdy sheeter)ಕಣ್ಣು ಬುಕ್ಕಿಗಳ ಮೇಲೆ ಬಿದ್ದಂತಿದೆ. ಬುಕ್ಕಿ ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದ ರೌಡಿಶೀಟರ್ನನ್ನು ಪೊಲೀಸರು ಬಂಧಿಸಿದ್ದಾರೆ. ರೌಡಿಶೀಟರ್ ಇಟ್ಟಮಡು ಸಾಗರ್ ಅಂಡ್ ಗ್ಯಾಂಗ್ ಬಂಧಿತರು. ಸಿಸಿಬಿ ಪೊಲೀಸರಿಂದ ಐವರನ್ನು ವಶಕ್ಕೆ ಪಡೆಯಲಾಗಿದ್ದು, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಕ್ರಿಕೆಟ್ ಬುಕ್ಕಿಯಾಗಿದ್ದ ಸಂತೋಷ್ ಎಂಬಾತನನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಮಹಿಳಾ ಐಪಿಎಲ್ ನಲ್ಲಿ ಸಂತೋಷ್ಗೆ ಸಾಕಷ್ಟು ಹಣ ಬಂದಿತ್ತು. ಈ ಹಿನ್ನೆಲೆ ಹಣಕ್ಕಾಗಿ ರೌಡಿಗಳು ಆತನನ್ನು ಟಾರ್ಗೆಟ್ ಮಾಡಿದ್ದಾರೆ.
ರೌಡಿಶೀಟರ್ ಸಾಗರ್ಗೆ ತಿಂಗಳಿಗೆ ಎರಡು ಲಕ್ಷ ರೂ. ಹಪ್ತಾ ಕೊಡುವಂತೆ ಸಂತೋಷ್ ಎಂಬಾತನಿಗೆ ಬೆದರಿಕೆ ಹಾಕಿದ್ದರು. ಹಣ ನೀಡಲು ನಿರಾಕರಿಸಿದ ವೇಳೆ ಸಂತೋಷ್ನನ್ನ ಕಿಡ್ನ್ಯಾಪ್ ಮಾಡಿ ಕನಕಪುರದ ಕಡೆಗೆ ಹೋಗಿದ್ದಾರೆ. ಖಚಿತ ಮಾಹಿತಿ ಅಧಾರಿಸಿ ಆರೋಪಿಗಳ ಬೆನ್ನುಬಿದ್ದ ಸಿಸಿಬಿ ಪೊಲೀಸರು ಕನಕಪುರದ ನಿರ್ಜನ ಪ್ರದೇಶದ ಬಳಿ ರೌಡಿಶೀಟರ್ ಸಾಗರ್ ಸೇರಿ ನಾಲ್ವರ ಬಂಧನ ಮಾಡಿದ್ದಾರೆ. ಸದ್ಯ ಸಿಸಿಬಿ ಪೊಲೀಸರಿಂದ ಆರೋಪಿಗಳ ತನಿಖೆ ಮಾಡಲಾಗುತ್ತಿದೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಾಡಲಾಗಿದೆ.