ಆಶಾ (asha) ಮತ್ತು ಅಂಗನವಾಡಿ (anganwadi) ಕಾರ್ಯಕರ್ತೆಯರಿಗಾಗಿ ಶೀಘ್ರದಲ್ಲೇ ರಾಜ್ಯ ಸರ್ಕಾರ ಆರನೇ ಗ್ಯಾರಂಟಿ (Sixth Guarantee) ಘೋಷಿಸಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದರು.
ಮಾಗಡಿ ಕೋಟೆ (magadi kote) ಮೈದಾನದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ (cm) ಸಿದ್ದರಾಮಯ್ಯ (siddaramaiah), ಉಪಮುಖ್ಯಮಂತ್ರಿ (dcm) ಡಿ.ಕೆ.
ಶಿವಕುಮಾರ್ (d.k. shivakumar) ಅವರೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲೇ 6ನೇ ಗ್ಯಾರಂಟಿ ಘೋಷಣೆ ಮಾಡಲಾಗುವುದು ಎಂದರು.
ನಮ್ಮದು ನುಡಿದಂತೆ ನಡೆದ ಸರ್ಕಾರ. ಕಾಂಗ್ರೆಸ್ ಅಂದ್ರೆ ಬದ್ಧತೆ. ಐದು ಗ್ಯಾರಂಟಿಗಳ ಜಾರಿ ಮಾಡಿ ನುಡಿದಂತೆ ನಡೆದಿದೆ ಎಂದರು.
ಕಳೆದ ಐದು ವರ್ಷಗಳಿಂದ ಸಂಸದರಾಗಿರುವ ಡಿ.ಕೆ. ಸುರೇಶ್ ಅಧಿಕಾರ ಸಿಕ್ಕಾಗ ಜನಸೇವೆ ಮಾಡುವ ಬೆರಳೆಣಿಕೆ ಮಂದಿಯಲ್ಲಿ ಒಬ್ಬರು ಎಂದ ಅವರು ವಿಪಕ್ಷಗಳು ನಮ್ಮನ್ನು ಟೀಕಿಸಿದರೂ ನಾವು ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು.
Laxmi News 24×7