ಪಾಕಿಸ್ತಾನದ ಪರ ಘೋಷಣೆ ಕೂಗುವವರು ತಾ**ಗಂಡರು – ಸದನದಲ್ಲಿ ಯತ್ನಾಳ್
ಬೆಂಗಳೂರು : ರಾಜ್ಯಸಭಾ ಚುನಾವಣೆಯ (Rajyasabha Election) ಬಳಿಕ ಕಾಂಗ್ರೆಸ್ (Congress) ಅಭ್ಯರ್ಥಿ ನಾಸಿರ್ ಹುಸೇನ್ (Nasir Hussain) ರ ವಿಜಯೋತ್ಸವದ ವೇಳೆ ಪಾಕಿಸ್ತಾನದ ಪರ ಘೋಷಣೆ (Pro Pakistan Slogan) ಕೂಗಿದ್ದಾರೆನ್ನಲಾದ ಪ್ರಕರಣವು ಬುಧವಾರ ಸದನದಲ್ಲಿ ಭಾರೀ ಗದ್ದಲ ನಡೆಯಲು ಕಾರಣವಾಯಿತು.
ಈ ವೇಳೆ ಶಾಸಕ ಬಸನಗೌಡ ಪಾಟೀಲ್ (Basanagouda Patil Yatnal) ಯತ್ನಾಳ್ ಮಾತನಾಡಿ, ಪಾಕಿಸ್ತಾನದ ಪರ ಘೋಷಣೆ ಕೂಗಿದವರು ತಾ**ಗಂಡರು ಎಂದು ಸದನದಲ್ಲಿ ಆಕ್ಷೇಪಾರ್ಹ ಪದಗಳೊಂದಿಗೆ ಆರ್ಭಟಿಸಿದರು.
ಕಾಂಗ್ರೆಸ್ ಸದಸ್ಯರ ಆಕ್ಷೇಪದ ನಡುವೆಯೂ ತಮ್ಮ ಪದಬಳಕೆಯನ್ನು ಸಮರ್ಥಿಸಿಕೊಂಡ ಬಸನಗೌಡ ಪಾಟೀಲ್ ಯತ್ನಾಳ್, ಹೌದು ಈ ದೇಶದ ಅನ್ನ ತಿಂದು ಇಲ್ಲಿಗೆ ದ್ರೋಹ ಬಗೆಯುವವರು ನಿಜಕ್ಕೂ ತಾ*ಗಂಡರು ಎಂದು ತಮ್ಮ ವಾಕ್ಯವನ್ನು ಪುನರುಚ್ಛರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸುನಿಲ್ ಕುಮಾರ್ ಕಾರ್ಕಳ, ಈ ದೇಶ ವಿಭಜನೆಯಾಗಿರುವುದೇ ಧರ್ಮಾಧಾರಿತವಾಗಿದೆ. ಘಟನೆ ನಡೆದೇ ಇಲ್ಲ ಎಂದು ಕೆಲವು ಶಾಸಕರು ಸಮರ್ಥಿಸಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದಿದ್ದಾರೆ. ಪರೋಕ್ಷವಾಗಿ ಈ ಬಗ್ಗೆ ಕಾಂಗ್ರೆಸ್ ಶಾಸಕರಲ್ಲೇ ಗೊಂದಲವಿದ್ದು, ಆರೋಪಿಯನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ. ಹೀಗಾಗಿ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಇದೊಂದು ದೇಶದ ಹಿತರಕ್ಷಣೆಯ ದೃಷ್ಟಿಯಿಂದ ಗಂಭೀರ ಪ್ರಕರಣವಾಗಿದೆ. ಈ ಹಿಂದೆಯೂ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಸಿಕ್ಕಿಬಿದ್ದಿದ್ದಾಗ ಕಾಂಗ್ರೆಸ್ ಇದೇ ರೀತಿ ವರ್ತಿಸಿತ್ತು ಎಂದು ಆರೋಪಿಸಿದರು.