ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದ್ರೂ ಈಗ ವಿವಾದದ ಸುಳಿಯಲ್ಲಿ ಸಿಲುಕುತ್ತಾ ಇದ್ದಾರೆ. ಅದ್ರಲ್ಲೂ ನಿರ್ಮಾಪಕ ಉಮಾಪತಿ ಬಗ್ಗೆ ಬಾಯಿಗೆ ಬಂದಂತೆ ದರ್ಶನ್ ಅವರು ಮಾತನಾಡಿದ್ದಾರೆ ಅಂತಾ ಆರೋಪ ಕೇಳಿಬರುತ್ತಿದೆ. ಇದೇ ಸಮಯದಲ್ಲಿ ನಟ ದರ್ಶನ್‌ರ ವಿರುದ್ಧ ಪೊಲೀಸ್ ಠಾಣೆಗೆ ಸಾಲು ಸಾಲು ಕಂಪ್ಲೇಂಟ್ ರಿಜಿಸ್ಟರ್ ಆಗುತ್ತಿದ್ದು, ಈಗ ಹೊಸ ತಲೆನೋವು ಶುರುವಾಗಿದೆ.ಎಲ್ಲವೂ ಚೆನ್ನಾಗಿಯೇ ಇತ್ತು, ನಟ ದರ್ಶನ್ ಅವರು ತಮ್ಮ ‘ಕಾಟೇರ’ ಸಿನಿಮಾ ಮೂಲಕ ಇಂಡಸ್ಟ್ರಿ ಹಿಟ್ ನೀಡಿ ಹೊಸ ದಾಖಲೆ ಬರೆದರು.
ಆದರೆ ಹೀಗೆ ‘ಕಾಟೇರ’ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ, ಹೊಸ ವಿವಾದ ಕೂಡ ಭುಗಿಲೆದ್ದಿತ್ತು. ಅದರಲ್ಲೂ ಕಾಟೇರ ಸಿನಿಮಾ 50 ದಿನ ಪೂರೈಸಿದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ, ನಟ ದರ್ಶನ್ ಅವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿತ್ತು. ಹೀಗಾಗಿ ಸಾಲು ಸಾಲಾಗಿ, ದೂರುಗಳನ್ನ ಕೊಡಲಾಗುತ್ತಿದೆ. ಈ ಹಿಂದೆ ಮಂಡ್ಯದಲ್ಲಿ ನಡೆದಿದ್ದ ದರ್ಶನ್ ಅವರ ಬೆಳ್ಳಿ ಪರ್ವ ಕೂಡ ದೊಡ್ಡ ಸಮಸ್ಯೆಯನ್ನ ತಂದೊಡ್ಡಿದೆ.Darshan; ನಟ ದರ್ಶನ್ ವಿರುದ್ಧ ದೂರುಗಳ ಸರಮಾಲೆ, ಮಹಿಳಾ ಆಯೋಗಕ್ಕೆ ದೂರು ನೀಡಿದ ಗೌಡತಿಯರು!
ದರ್ಶನ್‌ರ ವಿರುದ್ಧ ಪೊಲೀಸರಿಗೆ ದೂರು!ನಿನ್ನೆ ಕೂಡ ನಟ ದರ್ಶನ್ ಅವರ ವಿರುದ್ಧ ದೂರು ನೀಡಲಾಗಿತ್ತು, ಇಂದು ಕೂಡ ಮತ್ತೆ ಒಂದು ದೂರು ನೀಡಲಾಗಿದೆ. ಅದರಲ್ಲೂ ದರ್ಶನ್ ಅವರ ಫ್ಯಾನ್ಸ್ ಇದನ್ನೆಲ್ಲಾ ನೋಡಿ, ಚರ್ಚೆ ಶುರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ವಿಚಾರ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಹಾಗಾದರೆ ನಟ ದರ್ಶನ್ ಹೀಗೆ ದೊಡ್ಡ ಸಮಸ್ಯೆಗೆ ಸಿಲುಕಲು ಕಾರಣ ಆಗಿದ್ದು ಏನು? ನಿರ್ಮಾಪಕ ಉಮಾಪತಿ ಬಗ್ಗೆ ದರ್ಶನ್ ಅವರು ಹೇಳಿದ್ದು ಏನು ಗೊತ್ತೆ? ಮುಂದೆ ಓದಿ. ಅಯ್ಯೋ ತಗಡೇ, ರಾಬರ್ಟ್
ಕಥೆ..’ನಿರ್ಮಾಪಕ ಉಮಾಪತಿ ವಿರುದ್ಧ ಗರಂ ಆಗಿದ್ದ ದರ್ಶನ್ ನೇರ ವಾಗ್ದಾಳಿ ನಡೆಸುತ್ತಾ ‘ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂತಹ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?’ ಅಂತ ದರ್ಶನ್ ಕೇಳಿದ್ರು ಹೀಗೆ ಕಾಟೇರ ಕಥೆ ಬಿಟ್ಟುಕೊಟ್ಟಿದ್ದು ಯಾಕೆ? ಅಂತ ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ರು ದರ್ಶನ್. ಈ ಮಾತಿನ ಜೊತೆ ಮತ್ತಷ್ಟು ವಾಗ್ದಾಳಿ ಕೂಡ ನಡೆಸಿದ್ದರು ನಟ ದರ್ಶನ್. ‘ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು.
ಯಾಕೆ ಪದೇ ಪದೇ ನಮ್ಮ ಹತ್ರಾನೆ..’ ಹಿಂಗೆಲ್ಲ ಮಾತು ಆಡಿದ್ದರು ಚಾಲೆಂಜಿಂಗ್ ಸ್ಟಾರ್. ದರ್ಶನ್ ಅವರ ಈ ಹೇಳಿಕೆ ಈಗ ಕಿಚ್ಚು ಹೊತ್ತಿಸಿದೆ.ನಟ ದರ್ಶನ್ & ನಿರ್ಮಾಪಕ ಉಮಾಪತಿ ಜಗಳದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಶೇಕ್ ಆಗಿದ್ದು ಭಾರಿ ಚರ್ಚೆ ಹುಟ್ಟುಹಾಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ನಿರ್ಮಾಪಕ ಉಮಾಪತಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಜೊತೆಗೆ ಮೇಲಿಂದ ಮೇಲೆ ಕಂಪ್ಲೇಂಟ್ ಕೂಡ ಈಗ ರಿಜಿಸ್ಟೆರ್ ಆಗುತ್ತಿದೆ. ಹೀಗಾಗಿ ಸಮಸ್ಯೆ ದೊಡ್ಡದಾಗುತ್ತಿದೆ, ಮುಂದೆ ಏನಾಗುತ್ತೆ? ಅಂತಾನು ನಟ ದರ್ಶನ್ ಅವರ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ಇದೆಲ್ಲಾ ಕೈಮೀರಿ ಹೋಗುವ ಸಾಧ್ಯತೆ ದಟ್ಟವಾಗಿದೆ.