ಹಂದಿಗುಂದ: ‘ತಾಯಿ ಬಗ್ಗೆ ಎಷ್ಟೇ ವರ್ಣಿಸಿದರೂ ಕಡಿಮೆಯೇ. ನಮ್ಮ ದೇಶದಲ್ಲಿ ತಾಯಿ ಪರಮೋಚ್ಛ ಸ್ಥಾನ ನೀಡಲಾಗಿದೆ’ ಎಂದು ಗದಗ-ಡಂಬಳದ ತೋಂಟದಾರ್ಯ ಸಂಸ್ಥಾನಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಹಂದಿಗುಂದದಲ್ಲಿ ನಡೆದ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಪೂರ್ವಾಶ್ರಮದ ತಾಯಿ ಶಿವಗಂಗಮ್ಮ ಮಠದ ಅವರ ಅಮೃತ ಮಹೋತ್ಸವ ಮತ್ತು ಮಾತೃವಂದನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಿವಾನಂದ ಸ್ವಾಮೀಜಿ, ‘ಪ್ರತಿಯೊಬ್ಬರೂ ಹೆತ್ತವರ ಬಗ್ಗೆ ಕಾಳಜಿ ಮಾಡಬೇಕು. ಎಲ್ಲವನ್ನೂ ಮಾಡಿ ನಾನೇನು ಮಾಡಿಲ್ಲವೆಂದು ಹೇಳುವುದೇ ತಾಯಿಯ ಗುಣ. ತಾಯಿಗೆ ಕೃತಜ್ಞತೆ ಸಲ್ಲಿಸಿದರೆ, ಜೀವನ ಸಾರ್ಥಕವಾಗುತ್ತದೆ’ ಎಂದರು.
ಜಮಖಂಡಿ ಓಲೇಮಠದ ಚನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೋಕಾಕದ ಶೂನ್ಯ ಸಂಪಾದನಾ ಮಠದ ಬಸವಪ್ರಭು ದೇವರು, ಬೆಲ್ಲದ ಬಾಗೇವಾಡಿ ಮಠದ ಶಿವಾನಂದ ಸ್ವಾಮೀಜಿ, ಚಿಮ್ಮಡದ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅಭಿನಂದನಾ ನುಡಿಗಳನ್ನಾಡಿದರು.
ಗುರುಲಿಂಗಯ್ಯ ಹಿರೇಮಠ, ಬಿ.ಆರ್.ಆಜೂರ, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಖಾನಗೌಡ, ಗಿರಿಮಲ್ಲಪ್ಪ ಅಂದಾನಿ, ಕೃಷ್ಣಪ್ಪ ಮಂಟೂರ, ರಮೇಶ ಬಂದಿ, ಗುರುಲಿಂಗಯ್ಯ ಮಠದ, ಶಿವಲಿಂಗಪ್ಪ ವಾಲಿ, ಧರೆಪ್ಪ ಚಿನಗುಂಡಿ, ರಮೇಶ ಉಳ್ಳಾಗಡ್ಡಿ ಇದ್ದರು. ಗವಾಯಿ ಪಾಟೀಲ, ಗದಗ ತೋಟೆಂದ್ರಕುಮಾರ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ಸತೀಶ ಬಂದಿ ವಂದಿಸಿದರು.