ಬೆಂಗಳೂರು, ಫೆ.22: ನಗರದ (Bengaluru) ಡಿಜೆ ಹಳ್ಳಿಯ ಪ್ರಿಯಾ ನಗರದಲ್ಲಿರುವ ಮೆಡಿಕಲ್ ಶಾಪ್ವೊಂದರಲ್ಲಿ ನಡೆದಿದೆ ಎನ್ನಲಾದ ಹಫ್ತಾ (Hafta) ವಸೂಲಿ ಹಾಗೂ ಉಚಿತ ಐಟಂಗಳಿಗಾಗಿ ಯುವಕನಹೈಡ್ರಾಮದವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗುತ್ತಿದೆ.
ಡಿಜೆ ಹಳ್ಳಿ ಬಳಿ ಇರುವ ಪ್ರಿಯಾ ನಗರ ಮುಖ್ಯರಸ್ತೆಯಲ್ಲಿರುವ ರಿಝ್ವಾನ್ ಮೆಡಿಕಲ್ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಹಪ್ತಾ ಹಾಗೂ ಫ್ರೀ ಐಟಂಗಳಿಗಾಗಿ ಯುವಕನೊಬ್ಬ ಹುಚ್ಚನಂತೆ ವರ್ತನೆ ಮಾಡಿದ್ದಾನೆ. ರೋಲ್ ಕಾಲ್ ಕೊಡದಿದ್ದರೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ.
ಮೆಡಿಕಲ್ ಶಾಪ್ನಲ್ಲಿದ್ದ ವೃದ್ಧನ ಮುಂದೆ ಯುವಕ ಹುಚ್ಚಾಟ ಮೆರೆದ ಕೃತ್ಯದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಎಕ್ಸ್ (ಟ್ವಿಟರ್) ಎಂಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ