ಧಾರವಾಡ, ಫೆ.21: ಆಸ್ತಿ ವಿವಾದ ಸಂಬಂಧ ಎರಡು ಗುಂಪುಗಳು ಬಡಿದಾಡಿಕೊಂಡು ಚಿಕಿತ್ಸೆ ಫಲಕಾರಿಯಾಗದೇ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಧಾರವಾಡ(Dharwad) ತಾಲೂಕಿನತಲವಾಯಿಗ್ರಾಮದಲ್ಲಿ ನಡೆದಿದೆ. ಆಶೋಕ ಕಮ್ಮಾರ್(45) ಮೃತ ವ್ಯಕ್ತಿ. ಇನ್ನೊಬ್ಬ ಫಕೀರಪ್ಪ(50) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನಡೆದಿದೆ. ಇನ್ನು ಮೃತನ ಸಂಬಂಧಿಕರ ಗೋಳಾಟ ಮುಗಿಲುಮುಟ್ಟಿದೆ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಸ್ತಿಗಾಗಿ ತಮ್ಮನನ್ನೇ ಕೊಂದು ಹಾಕಿದ ಅಣ್ಣ
ಮನೆ, ಹೊಲದ ಆಸ್ತಿಗಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಈ ಕುರಿತು ಅನೇಕ ಬಾರಿ ಸುತ್ತಮುತ್ತಲಿನ ಗ್ರಾಮಗಳ ಹಿರಿಯರ ಮಧ್ಯಸ್ಥಿಕೆಯಲ್ಲಿ ರಾಜಿ-ಸಂಧಾನ ನಡೆಸಲಾಗಿತ್ತು. ಆದರೂ ವಿವಾದ ತಣ್ಣಗಾಗಿರಲಿಲ್ಲ. ಇಬ್ಬರ ನಡುವೆ ನಿರಂತರ ಜಗಳ ಆಗುತ್ತಲೇ ಇತ್ತು. ಇಂದು ಜಗಳ ವಿಕೋಪಕ್ಕೆ ಹೋಗಿ ಆಸ್ತಿಗಾಗಿ ತಮ್ಮನನ್ನೇ ಅಣ್ಣ ಕೊಂದು ಹಾಕಿದ್ದಾನೆ.