ದಾವಣಗೆರೆ, ಫೆಬ್ರವರಿ 21: ನಾನು ದೆಹಲಿಗೆ ಟಿಕೆಟ್ ಕೇಳಲು ಹೋಗಿಲ್ಲ, ಪಕ್ಷದ ಸಭೆಗಾಗಿ ಹೋಗಿದ್ದೆ ಎಂದು ಬಿಜೆಪಿ ಸಂಸದ ಸಿದ್ದೇಶ್ವರ(GM Siddeshwara)ಸ್ಪಷ್ಟನೆ ನೀಡಿದ್ದಾರೆ. ದಾವಣಗೆರೆ ತಾಲೂಕಿನ ವಡ್ಡಿನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ದಾವಣಗೆರೆ ಕ್ಷೇತ್ರಕ್ಕೆ ಟಿಕೆಟ್ ಬೇಡಿಕೆ ಮೊದಲಿನಿಂದಲೂ ಇದೆ. ಆದರೆ ಈ ಬಾರಿ ಆಕಾಂಕ್ಷಿಗಳ ಪಟ್ಟಿ ಸ್ವಲ್ಪ ಹೆಚ್ಚಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಈ ಬಾರಿಯೂ ನನಗೆ ಕೊಡುತ್ತಾರೆ. ಜನರ ಆಶೀರ್ವಾದ ಇದ್ದರೇ 5ನೇ ಬಾರಿ ಸಂಸದನಾಗುವೆ. ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನೆಂದು ಕಾಂಗ್ರೆಸ್ನವರು ಹೇಳುತ್ತಿದ್ದರು. ಈ ಹಿಂದೆ ನನ್ನನ್ನು ದಾವಣಗೆರೆ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದರು. ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಯಾರು ಗಂಡಸರಿಲ್ವಾ ಅಂತಿದ್ದರು. ಇದೇ ಮಾತನ್ನು ಈಗ ನಮ್ಮ ಬಿಜೆಪಿಯ ಕೆಲ ನಾಯಕರು ಹೇಳುತ್ತಿದ್ದಾರೆ ಎಂದಿದ್ದಾರೆ.
ನನ್ನ ಪುತ್ರನಿಗೆ ಟಿಕೆಟ್ ಕೇಳಿಲ್ಲ, ಆತ ಸ್ಪರ್ಧೆ ಮಾಡಿದರೆ ಮಾಡಬಹುದು. ನಮ್ಮ ತಂದೆ ಸಂಸದ, ನಾನು ಸಂಸದ, ಪುತ್ರ ಸಂಸದನಾದರೂ ಹೊಸದೇನಿಲ್ಲ. ತಂದೆ, ಮಗ, ಮೊಮ್ಮಗ ಬೇರೆ ಪಕ್ಷದಲ್ಲಿ ಬೇಕಾದಷ್ಟು ಜನ ಸಿಗುತ್ತಾರೆ ಎಂದು ಹೇಳಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಹಾಲಿ ಸಂಸದ ಜಿಎಂ ಸಿದ್ದೇಶ್ವರ. ಆದ್ದರಿಂದ ನಾನು ಎಲ್ಲೇ ಹೋದರೂ ಎಚ್ಚರಿಕೆಯಿಂದ ಇರುತ್ತೇನೆ. ಯಾರು ಏನೇ ಕೊಟ್ಟರೂ ತಿನ್ನುವುದಿಲ್ಲ ಎಂದು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು.
ಸ್ವತಹ ಎಸ್ಪಿ ಉಮಾ ಪ್ರಶಾಂತ ಜಿಎಂಐಟಿ ಅತಿಥಿ ಗೃಹಕ್ಕೆ ಹೋಗಿ ಮಾಹಿತಿ ಒಡೆದರು. ಇನ್ನೂ ಜನವರಿ 22 ಕ್ಕೆ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನಲೆ ಪ್ರಧಾನಿ ನರೇಂದ್ರ ಮೋದಿ ದೇವಾಲಯಗಳ ಸ್ವಚ್ಛತೆಗೆ ಕರೆಕೊಟ್ಟ ಹಿನ್ನಲೆ ಇಂದು ನಗರದ ಚಂದ್ರಮೌಳೇಶ್ವರ, ಕೇದಾರ ಲಿಂಗೇಶ್ವರ ದೇವಾಲಯದಲ್ಲಿ ಬಿಜೆಪಿಯ ಎಂ ಎಲ್ ಸಿ ರವಿಕುಮಾರ್ ಮತ್ತು ಬಿಜೆಪಿ ಹಲವು ಕಾರ್ಯಕರ್ತರ ಜೊತೆಗೂಡಿ ಸ್ವಚ್ಛತೆ ಕಾರ್ಯ ಮಾಡಿದ ಜಿ ಎಂ ಸಿದ್ದೇಶ್ವರ ಬಳಿಕ ತನಗೆ ಚುನಾವಣಾ ಹೊತ್ತಿನಲ್ಲಿ ಈ ರೀತಿಯಾಗಿ ಕೆಲ ವ್ಯಕ್ತಿಗಳು ದಾವಣಗೆರೆಯಿಂದ ಸಿದ್ದೇಶಪ್ಪನನ್ನು ತೆಗೆಯಬೇಕು ಎಂದು ಹೊಂಚು ಹಾಕಿದ್ದಾರೆ. ನನ್ನ ಸ್ನೇಹ ಬಳಗದಲ್ಲೇ ಈ ರೀತಿಯಾಗಿ ಹೊಂಚು ಹಾಕುತ್ತಿದ್ದಾರೆ ಎಂದು ಸಂಸದ ಜಿಎಂ ಸಿದ್ದೇಶ್ವರ ತಿಳಿಸಿದ್ದರು.
ಲೋಕ ಸಭೆ ಚುನಾವಣೆಗೆ ಟಿಕೆಟ್ಗಾಗಿ 6-7 ಜನ ಆಕಾಂಕ್ಷೆಗಳಿದ್ದು, ನಮ್ಮ ಕುಟುಂಬಕ್ಕೆ 7 ಬಾರಿ ಬಿಜೆಪಿ ಪಕ್ಷ ಟಿಕೆಟ್ ನೀಡಿದೆ. ಈಗಲೂ ನನಗೆ ಟಿಕೆಟ್ ಸಿಗುತ್ತೆ ಎನ್ನುವ ವಿಶ್ವಾಸ ಹೊಂದಿರುವ ಜಿ.ಎಂ ಸಿದ್ದೇಶ್ವರ ಚುನಾವಣೆ ಇನ್ನೇನು ಕೆಲವೇ ತಿಂಗಳು ಇರುವಾಗ ಈ ರೀತಿಯ ಹೇಳಿಕೆ ನಿಜಕ್ಕೂ ಆಶ್ಚರ್ಯಕರವಾಗಿದೆ ಎಂದು ಹೇಳಬಹುದು