Breaking News

ನಕಲಿ ಛಾಪಾ ಕಾಗದ ಬಳಸಿ ಭೂ ಕಬಳಿಕೆ

Spread the love

ಬೆಳಗಾವಿ, ಫೆಬ್ರವರಿ 21: ಕರೀಮ್ ಲಾಲ್ ತೆಲಗಿ ನಕಲಿ ಛಾಪಾ ಕಾಗದ ಹಗರಣ ಬಳಿಕ, ಬೆಳಗಾವಿಯಲ್ಲಿ (Belagavi) ಮತ್ತೊಂದು ನಕಲಿ ಬಾಂಡ್ (Fake Bond) ತಯಾರಿಸಿ ವಂಚಿಸುವ ಗ್ಯಾಂಗ್ ಆಕ್ಟೀವ್ ಆಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ​ನಕಲಿ ಛಾಪಾ ಕಾಗದದ ಮೂಲಕ ದಾಖಲೆಗಳನ್ನು ಸೃಷ್ಟಿ ಅಕ್ರಮವಾಗಿ ಭೂಮಿಯನ್ನು ಕಬಳಿಕೆ ಮಾಡಿಕೊಂಡ ದಂಧೆ ಬೆಳಗಾವಿಯಲ್ಲಿ ವರದಿಯಾಗಿದೆ. ಯರಗಟ್ಟಿ (Yaragatti) ತಾಲೂಕಿನ‌ ಮಾಡಮಗೇರಿ ಗ್ರಾಮ ‌ಪಂ‌ಚಾಯಿತಿ ವ್ಯಾಪ್ತಿಯಲ್ಲಿ ಅಮರೇಶ ಹೊಸಮನಿ ಎಂಬುವರಿಗೆ ಸೇರಿದ ಒಟ್ಟು 12 ಗುಂಟೆ ಜಾಗದ ಪೈಕಿ 6 ಗುಂಟೆ ಜಾಗವಿದೆ. ದುರುಳರು ಅಮರೇಶ ಹೊಸಮನಿ ಅವರ ನಕಲಿ ಸಹಿ ಮತ್ತು ಫೇಸ್​ಬುಕ್​ನಿಂದ ಅವರ ಫೋಟೊ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಬಳಿಕ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಆಸ್ತಿ ಪರಭಾರೆ ಮಾಡಿಕೊಂಡು, ಬಳಿಕ ಮೂರು ಕೋಟಿ ರೂ.ಗೆ ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ.

ಭೂ ಮಾಫಿಯಾ ದಂದೆಕೋರರು ಅಧಿಕಾರಿಗಳಿಂದಲೇ ಆಸ್ತಿ ಪರಭಾರೆ ಮಾಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಸವದತ್ತಿ ತಾಲೂಕು ಪಂಚಾಯತಿ ಇಒ ಯಶವಂತ ಹೊಸಮನಿ ಮತ್ತು ಮಾಡಮಗೇರಿ ಗ್ರಾಮ ಪಂಚಾಯಿತಿ ಪಿಡಿಒ ಶೇರಿ ಮೇಲೆ ಕಾಂಗ್ರೆಸ್ ಮುಖಂಡ ಲಖನ್​ ಸವಸುದ್ದಿ ಆರೋಪ ಮಾಡಿದ್ದಾರೆ. ಸದ್ಯ ಈ ಸಂಬಂಧ ಮುರುಗೋಡ ಠಾಣೆ ಪ್ರಕರಣ ದಾಖಲಾಗಿದೆ. ಇತ್ತ ಲಖನ್ ಸವಸಿದ್ದು ಲೋಕಾಯುಕ್ತ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಟೊಮೊಟೊ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಕಂಡ ಕಾಡಾನೆ ಓಡೋಡಿ ಬಂದು ತಿಂದಿದೆ.

Spread the loveಚಾಮರಾಜನಗರ: ಕಾಡಾನೆಗೆ ಊಟ, ರೈತನಿಗೆ ಪ್ರಾಣ ಸಂಕಟ ಎಂಬಂತೆ ನಡುರಸ್ತೆಯಲ್ಲಿ ಪಲ್ಟಿಯಾದ ಈಚರ್ ವಾಹನ ಕಂಡು ಕಾಡಾನೆಯೊಂದು ಓಡೋಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ