Breaking News

ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾ

Spread the love

ಬೆಳಗಾವಿ, ಫೆಬ್ರವರಿ 20: ತಾನು ಟಿವಿ9 ಮರಾಠಿ ವಾಹಿನಿಯ ಮುಖ್ಯಸ್ಥ ಅಂತಾ ಹೇಳಿಕೊಂಡು ಬೆಳಗಾವಿ ಜಿಲ್ಲೆಯ ಅಥಣಿ ಭಾಗದಲ್ಲಿ ಅಡ್ಡಾಡುತ್ತಿದ್ದ ರಮಜಾನ್ ಸುಭಾನ್ ಮುಜಾವರ್ ಎಂಬ ವ್ಯಕ್ತಿಯ ವಿರುದ್ಧ ಎಫ್​ಐಆರ್​​ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ಟಿವಿ9 ಹೆಸರು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ವಿರುದ್ಧ ಎಫ್​ಐಆರ್, ಆರೋಪಿ ಸೀದಾ ಜೈಲಿಗೆ

 

ಅಥಣಿ ತಾಲೂಕಿನಲ್ಲಿ ಕೆಲ ದಿನಗಳಿಂದ ಮಹಾರಾಷ್ಟ್ರ ಪಶ್ಚಿಮ ಭಾಗದ ಮರಾಠಿ ವಾಹಿನಿ ಮುಖ್ಯಸ್ಥ ಅಂತಾ ರಮಜಾನ್ ಹೇಳಿಕೊಂಡು ಓಡಾಡುತ್ತಿದ್ದ. ಇದನ್ನ ನಮ್ಮ ಬೆಳಗಾವಿ ಪ್ರತಿನಿಧಿ ಹಿರಿಯ ವರದಿಗಾರ ಸಹದೇವ ಮಾನೆ ಗಂಭೀರವಾಗಿ ಪರಿಗಣಿಸಿದ್ದರು. ಕೆಲ ದಿನಗಳ ಹಿಂದೆ ಆತ ಅಥಣಿ ಪಟ್ಟಣದಲ್ಲಿ ಸಾರ್ವಜನಿಕರ ಎದುರು ಟಿವಿ9 ಲೆಟರ್ ಹೆಡ್ ನ ನಕಲಿ ದಾಖಲೆ ಹಾಗೂ ಐಡಿ ಕಾರ್ಡ್ ತೋರಿಸಿ ಸುದ್ದಿಗಳನ್ನ ಮಾಡುವುದಾಗಿ ಹೇಳುತ್ತಿದ್ದ.

ಈ ವಿಚಾರವನ್ನ ವರದಿಗಾರ ಸಹದೇವ ಅವರು ಟಿವಿ9 ಕನ್ನಡ ವಾಹಿನಿ ಕಾನೂನು ಸಲಹೆಗಾರ ಸತ್ಯಕುಮಾರ್ ಅವರ ಗಮನಕ್ಕೆ ತಂದಿದ್ದರು. ಅವರ ಸಲಹೆ ಮೇರೆಗೆ ಆತನ ವಿಳಾಸ ಪಡೆದು ಅಥಣಿಯಲ್ಲಿ ಕೇಸ್ ದಾಖಲಿಸುವ ಚಿಂತನೆ ಕೂಡ ನಡೆದಿತ್ತು. ಈ ಬೆಳವಣಿಗೆ ಮಧ್ಯೆ ರಮಜಾನ್ ಮುಜಾವರ್ ಇಂದು ಬೆಳಗಾವಿ ನಗರದಲ್ಲೇ ನಮ್ಮ ವರದಿಗಾರ ಸಹದೇವ ಮಾನೆ ಮುಂದೆ ತಗ್ಲಾಕ್ಕೊಂಡಿದ್ದ.

ಸುದ್ದಿ ನಿಮಿತ್ತ ಸಾಹಿತ್ಯ ಭವನಕ್ಕೆ ಬಂದಿದ್ದ ನಮ್ಮ ವರದಿಗಾರ ಅಲ್ಲೇ ನಿಂತಿದ್ದ ಎರಿಟಿಗಾ ವಾಹನ ಗಮನಸಿದ್ದ. ಅದರ ಬಾನೆಟ್ ಮೇಲೆ ಟಿವಿ9 ಮರಾಠಿ ಅಂತಾ ದೊಡ್ಡದಾಗಿ ಸ್ಟಿಕರ್ ಅಂಡಿಸಿದ್ದನ್ನ ಗಮನಿಸಿದ್ದ. ಅಲ್ಲೇ ಇದ್ದ ವ್ಯಕ್ತಿಯನ್ನ ವಿಚಾರಿಸಿದಾಗ ತಾನು ಟಿವಿ9 ಮರಾಠಿ ವಾಹಿನಿಯಲ್ಲಿ ಕೆಲಸ ಮಾಡ್ತಿದ್ದೇನೆ. ಸಾಂಗ್ಲಿ, ಮಿರಜ್, ಕೊಲ್ಲಾಪುರ, ಸತಾರಾ ಸೇರಿ ಪಶ್ಚಿಮ ಭಾಗದ ಹೆಡ್ ಇದ್ದೇನೆ‌. ಈ ಎಲ್ಲ ಭಾಗಗಳ ರಿಪೋರ್ಟರುಗಳು ನನ್ನ ಕೈಕೆಳಗೆ ಕೆಲಸ ಮಾಡ್ತಾರೆ ಅಂತಾನೂ ಹೇಳಿದ್ದ.

 


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಚಿವ ರಾಮಲಿಂಗಾರೆಡ್ಡಿ ಭೇಟಿ: ಅಭಿವೃದ್ಧಿ ಯೋಜನೆಗಳ ಅವಲೋಕನ

Spread the love ಸುಬ್ರಹ್ಮಣ್ಯ, ದಕ್ಷಿಣ ಕನ್ನಡ: ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ