ಬೆಂಗಳೂರು, (ಫೆಬ್ರವರಿ 20): ಬೇರೊಬ್ಬನ ಜೊತೆ ಅನೈತಿಕ ಸಂಬಂಧದ(illicit relationship_ ಅನುಮಾನದ ಮೇಲೆ ನಡುರಸ್ತೆಯಲ್ಲೇ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆಯನ್ನು (Assault) ಮಾಡಿದ್ದಾನೆ. ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಪತ್ನಿಗೆ ಮಚ್ಚಿನಿಂದ ಹೊಡೆದಿದ್ದಾನೆ.
ಬೆಂಗಳೂರಿನ(Bengaluru) ಜೀವನ್ ಭೀಮಾ ನಗರದ ವಿಂಡ್ ಟನಲ್ ರಸ್ತೆಯಲ್ಲಿ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶೇಕ್ ಮುಜೀಬ್ ಎನ್ನುವಾತ ನೈಗರ್ (28) ಎನ್ನುವಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದ್ರೆ, ಹೆಂಡ್ತಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಾಳೆಂದು ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ನೈಗರ್ಳ ತಲೆಗೆ ಮಚ್ಚಿನ ಏಟು ಬಿದ್ದಿದ್ದು, ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇನ್ನು ಶೇಕ್ ಮುಜೀಬ್ ನನ್ನು ಜೆ ಬಿ ನಗರ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.