Breaking News
Home / ರಾಜಕೀಯ / ಪುತ್ರನ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ತಾಯಿ ಸಹಾಯಕ್ಕೆ ಧಾವಿಸಿದ ಯಂಗ್ ಬೆಲಗಾಮ್ ಫೌಂಡೇಶನ್; ಸಿಎಂ ಸಿದ್ದರಾಮಯ್ಯ ನೆನೆದು ಕಣ್ಣೀರು ಹಾಕಿದ ಅಜ್ಜಿ

ಪುತ್ರನ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ತಾಯಿ ಸಹಾಯಕ್ಕೆ ಧಾವಿಸಿದ ಯಂಗ್ ಬೆಲಗಾಮ್ ಫೌಂಡೇಶನ್; ಸಿಎಂ ಸಿದ್ದರಾಮಯ್ಯ ನೆನೆದು ಕಣ್ಣೀರು ಹಾಕಿದ ಅಜ್ಜಿ

Spread the love

ಬೆಳಗಾವಿ,: ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಅಂತ್ಯಕ್ರಿಯೆಗೆ (Last Rites) ದುಡ್ಡಿಲ್ಲದೇ ಪರದಾಡುತ್ತಿದ್ದ ತಾಯಿಗೆ ಬೆಳಗಾವಿಯ (Belagavi) ವಿಜಯ ಮೋರೆ ಅವರ ಯಂಗ್ ಬೆಲಗಾಮ್ ಫೌಂಡೇಶನ್ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದೆ. ಹಣವಿಲ್ಲದೇ ಪರದಾಡುತ್ತಿದ್ದ ಹೆತ್ತತಾಯಿಯ ನೆರವಿಗೆ ಬಂದ ಯಂಗ್ ಬೆಲಗಾಮ್ ಫೌಂಡೇಶನ್ ಹಿಂದೂ ಸಂಪ್ರದಾಯದಂತೆ ವಿಧಿವಿಧಾನಗಳನ್ನ ಮುಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಪುತ್ರನ ಅಂತ್ಯಕ್ರಿಯೆಗೆ ಪರದಾಡುತ್ತಿದ್ದ ತಾಯಿ ಸಹಾಯಕ್ಕೆ ಧಾವಿಸಿದ ಯಂಗ್ ಬೆಲಗಾಮ್ ಫೌಂಡೇಶನ್; ಸಿಎಂ ಸಿದ್ದರಾಮಯ್ಯ ನೆನೆದು ಕಣ್ಣೀರು ಹಾಕಿದ ಅಜ್ಜಿ

ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ವಿಶ್ವನಾಥ ಶಿವಲಿಂಗಪ್ಪ ಗುರಕ್ಕನವರ(34) ಎಂಬುವವರು ಅನಾರೋಗ್ಯದಿಂದಾಗಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮೃತ ವಿಶ್ವನಾಥನ ತಾಯಿ‌ ನೀಲವ್ವ ಗುರಕ್ಕನವರು ಮೃತ ಮಗನ ಅಂತ್ಯಕ್ರಿಯೆಗೆ ಹಣವಿಲ್ಲದೇ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಈ ವೇಳೆ ತಾಯಿ ನೀಲವ್ವನವರ ನೆರವಿಗೆ ಬಂದ ಯಂಗ್ ಬೆಲಗಾಮ್ ಫೌಂಡೇಶನ್ ಅಂತ್ಯಕ್ರಿಯೆಗೆ ಸಹಾಯ ಮಾಡಿದೆ.

ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ನೀಲವ್ವ ಅವರಿಗೆ ಸಾಂತ್ವನ ಹೇಳಿ ನಿಮ್ಮ ಜೊತೆ ನಾವಿದ್ದೇವೆ. ನಾವೇ ಮುಂದೆ ನಿಂತು ನಿಮ್ಮ ಮಗನ ಅಂತ್ಯಕ್ರಿಯೆ ನೆರವೇರಿಸುತ್ತೇವೆ ಎಂದು ಧೈರ್ಯ ತುಂಬಿ ಬೆಳಗಾವಿ ಸದಾಶಿವ ನಗರದ ಸ್ಮಶಾನದಲ್ಲಿ ವಿಧಿ ವಿಧಾನ ಪೂರ್ಣಗೊಳಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ತಮ್ಮ ಕೈಯಾರೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇನ್ನು ಮಗನ ಅಂತ್ಯಕ್ರಿಯೆ ವೇಳೆ ಸಿದ್ದರಾಮಯ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯ 2ಸಾವಿರ ರೂಪಾಯಿ ನೆನೆಸಿಕೊಂಡು ಅಜ್ಜಿ ಕಣ್ಣೀರು ಹಾಕಿದರು.

ಮೃತ ಪುತ್ರನಿಗೆ ಅಂತಿಮ‌ ನಮನ ಸಲ್ಲಿಸುವ ವೇಳೆ ಅಜ್ಜಿ ನೀಲವ್ವ ಕಣ್ಣೀರು ಹಾಕಿದರು. ಪ್ರತಿ ತಿಂಗಳು 2ಸಾವಿರ ರೂಪಾಯಿ ಬರುತ್ತೆ, ಅದರಲ್ಲಿ ನಮ್ಮವ್ವನ ಹೊಟ್ಟೆ ತುಂಬುತ್ತೆ ಎಂದು ಮಗ ಹೇಳಿದ್ದಾಗಿ ನೆನಪಿಸಿಕೊಂಡು ತಾಯಿ ನೀಲವ್ವ ಕಣ್ಣೀರು ಹಾಕಿದರು. ಸದ್ಯ ತಾಯಿ ತನ್ನ ಮಗನ ಅಂತ್ಯಸಂಸ್ಕಾರ ಮಾಡಿ ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಎಣ್ಣೆಯಲ್ಲೂ ಬಡವರಿಗೆ ಬರೆ, ಶ್ರೀಮಂತರ ಮದ್ಯದ ದರ ಇಳಿಕೆ, ಬಡವರ ಮದ್ಯ ದುಬಾರಿ!

Spread the love ಬೆಂಗಳೂರು: ಕರ್ನಾಟಕದಲ್ಲಿ ಒಂದೇ ಬಾರಿ ಮದ್ಯದ ದರ ಏರಿಕೆ ಮತ್ತು ಇಳಿಕೆ ಎರಡೂ ಆಗುತ್ತಿದೆ! ಹೌದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ