Breaking News
Home / ರಾಜಕೀಯ / ಪ್ರತಿಪಕ್ಷದಿಂದ ಸಭಾತ್ಯಾಗ – ಇದು ನಾಚಿಕೆಗೇಡು ಎಂದ ಸಿಎಂ!

ಪ್ರತಿಪಕ್ಷದಿಂದ ಸಭಾತ್ಯಾಗ – ಇದು ನಾಚಿಕೆಗೇಡು ಎಂದ ಸಿಎಂ!

Spread the love

ಬೆಂಗಳೂರು : ಬಜೆಟ್‌ (Karnataka Budget 2024) ಮೇಲಿನ ಚರ್ಚೆಯ ಎರಡನೇ ದಿನವಾದ ಮಂಗಳವಾರ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಷಣದ ವೇಳೆ ಕುಪಿತರಾದ ಬಿಜೆಪಿ (BJP) ನಾಯಕರು ಸಾಮೂಹಿಕವಾಗಿ ಸಭಾತ್ಯಾಗ (Session walkout) ಮಾಡಿದರು. ಇದನ್ನು ಲೇವಡಿ ಮಾಡಿದ ಸಿಎಂ ಸಿದ್ದರಾಮಯ್ಯ ನಾಚಿಕೆಯಿಂದ ಬಿಜೆಪಿವರು ಹೊರಗೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.

 

ಕೇಂದ್ರ ಬೆಜಟ್‌ ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಹೆಚ್ಚಿನ ನೆರವು ನೀಡಿಲ್ಲ. ಜೊತೆಗೆ ತೆರಿಗೆ ಹಂಚಿಕೆಯಲ್ಲಿಯೂ ಸಹ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ನುಡಿದರು. ಇದು ಬಿಜೆಪಿಯವರನ್ನು ಕೆರಳಿಸಿತು.

BJP Walkout : ಪ್ರತಿಪಕ್ಷದಿಂದ ಸಭಾತ್ಯಾಗ - ಇದು ನಾಚಿಕೆಗೇಡು ಎಂದ ಸಿಎಂ!

ಬಸವರಾಜ ಬೊಮ್ಮಾಯಿ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಎದ್ದು ನಿಂತು ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಲೋಕಪಯೋಗಿ ಯೋಜನೆಗಳಿಗೆ ಸಾಕಷ್ಟು ನೆರವು ನೀಡಿದೆ ಎಂದು ವಾದಿಸಿದರು.

ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ದಲಿತರ ಪರವಾಗಲೀ, ಅಲ್ಪಸಂಖ್ಯಾತರ ಪರವಾಗಲೀ ನಿಮಗೆ ಕಾಳಜಿಯಿಲ್ಲ. ಕೇವಲ ಸದನದಲ್ಲಿ ಎದ್ದು ನಿಂತು ಆರ್ಭಟಿಸುವುದಕ್ಕಷ್ಟೇ ನಿಮ್ಮ ರಾಜಕೀಯ ಸೀಮಿತ ಎಂದು ಟೀಕಿಸಿದರು.

ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಸಭಾತ್ಯಾಗ ಮಾಡಿದರು. ಇದನ್ನು ನೋಡಿ ನಾಚಿಕೆಯಾಗಬೇಕು ನಿಮಗೆ. ನಾಚಿಕೆ ತಡೆಯಲಾರದೇ ನೀವು ಹೊರಹೋಗುತ್ತಿದ್ದೀರಿ ಎಂದು ಸಿಎಂ ಛೇಡಿಸಿದರು.


Spread the love

About Laxminews 24x7

Check Also

ಎಣ್ಣೆಯಲ್ಲೂ ಬಡವರಿಗೆ ಬರೆ, ಶ್ರೀಮಂತರ ಮದ್ಯದ ದರ ಇಳಿಕೆ, ಬಡವರ ಮದ್ಯ ದುಬಾರಿ!

Spread the love ಬೆಂಗಳೂರು: ಕರ್ನಾಟಕದಲ್ಲಿ ಒಂದೇ ಬಾರಿ ಮದ್ಯದ ದರ ಏರಿಕೆ ಮತ್ತು ಇಳಿಕೆ ಎರಡೂ ಆಗುತ್ತಿದೆ! ಹೌದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ