ಮಂಡ್ಯ, ಫೆ.18: ಮತ್ತೊಮ್ಮೆ ಮಂಡ್ಯ ಲೋಕ ಸಭಾ ಅಖಾಡಕ್ಕೆ (Mandya Lok Sabha) ಸುಮಲತಾ ಅಂಬರೀಶ್ (Sumalatha Ambarish) ಅವರು ಇಳಿಯುತ್ತಿರುವುದು ಬಹುತೇಕ ಫಿಕ್ಸ್ ಆಗಿದೆ. ಈ ಬಗ್ಗೆ ಅವರೇ ಕೇಳಿ ಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಚಂದನವನಕ್ಕೆ ಕಾಲಿಟ್ಟು 25 ವರ್ಷಗಳು ತುಂಬಿದ ಹಿನ್ನೆಲೆ ಸಕ್ಕರೆನಾಡು ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಅದ್ದೂರಿಯಾಗಿ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ರೆಬಲ್ ಲೇಡಿ ಸುಮಲತಾ ಅವರು ಮತ್ತೆ ಸುಳಿವು ಕೊಟ್ಟಿದ್ದಾರೆ.
ಮಂಡ್ಯ ಮಣ್ಣು ಬಿಡಲ್ಲ ಎನ್ನುತ್ತಲೇ ಎದುರಾಳಿಗಳಿಗೆ ಸಂದೇಶ ರವಾನಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೂ ಕಣ್ಣಕ್ಕಿಳಿಯುವ ಸೂಚನೆ ನೀಡಿದ್ದಾರೆ. 2019ರ ಚುನಾವಣೆ ನೆನೆದು ಸುಮಲತಾ ಅವರು ಭಾವುಕರಾದರು. ಕಾರ್ಯಕ್ರಮದಲ್ಲಿ ಮಾತನಾಡುತ್ತ, ಆ ಸಂದರ್ಭದಲ್ಲಿ ದರ್ಶನ್, ಯಶ್ ನನಗೆ ಧೈರ್ಯ ತುಂಬಿದ್ರು. ಕಳೆದ 5 ವರ್ಷ ಮಂಡ್ಯ ಜನರ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕವಿಟ್ಟು ಅಂಬರೀಶ್ಗೆ ಬೀಳ್ಕೊಟ್ಟೆವು. ಯಾವುದೇ ಕಾರಣಕ್ಕೂ ನಾನು ಕೂಡ ಈ ಮಣ್ಣನ್ನ ಬಿಡೋದಿಲ್ಲ. ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ. ಈ ಚುನಾವಣೆಯಲ್ಲಿಯೂ ದರ್ಶನ್ ತನ್ನ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕವೇ ಸುಳಿವು ಕೊಟ್ಟಿದ್ದಾರೆ. ಚುನಾವಣೆ ಹತ್ತಿರವಾಗ್ತಿದ್ದಂತೆ ಸುಮಲತಾ ಕುತೂಹಲ ಹೆಚ್ಚಿಸಿದ್ದಾರೆ.