ವಿಜಯಪುರ: ಮುಸ್ಲಿಮರಿಗೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟರೆ ತಪ್ಪೇನು ಎಂದು ಗೃಹ ಸಚಿವ ಡಾ. ಪರಮೇಶ್ವರ ನೀಡಿರುವ ಹೇಳಿಕೆಯನ್ನು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಯತ್ನಾಳ, ಡಾ.ಪರಮೇಶ್ವರ್ ಅವರೇ, ಸರ್ವ ಧರ್ಮ ಸಹಿಷ್ಣುತೆ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಘೋಷಣೆಗಳು ನಿಮ್ಮ ಭಾಷಣಕ್ಕೆ ಸೀಮಿತವಾಯಿತೇ?
ತೆರಿಗೆ ದಾರರ ಹಣವನ್ನು equitable ಆಗಿ ಹಂಚಬೇಕಾಗಿದ್ದು ಸರ್ಕಾರದ ಹೊಣೆ. ಮುಸಲ್ಮಾನರಿಗೆ ಹೆಚ್ಚು, ಹಿಂದೂಗಳಿಗೆ ಕಡಿಮೆ ಈ ರೀತಿಯಾದ ತಾರತಮ್ಯವೇಕೆ ? ಸಂದರ್ಭಕ್ಕನುಗುಣವಾಗಿ ಮಾತನಾಡುವ ನೀವು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯದಂತೆ ನಡೆದುಕೊಳ್ಳುತ್ತಿದ್ದೀರಾ ಎಂಬುದನ್ನು ಪರಾಮರ್ಶಿಸಿ ಎಂದು ಟೀಕಿಸಿದ್ದಾರೆ.
Laxmi News 24×7