ಆನೇಕಲ್, ಫೆ.17: ತಮಿಳುನಾಡು ಹಾಗೂ ಕರ್ನಾಟಕ ಗಡಿ ಭಾಗದಲ್ಲಿಕಾಡಾನೆಗಳ(Wild Elephant) ಹಾವಳಿ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರಿನ ಆನೇಕಲ್ ತಾಲೂಕಿನ ಬಳಿ ಇರುವ ತಮಿಳುನಾಡಿಗೆ (Tamil Nadu) ಡೆಂಕಣಿಕೋಟೆ ಗ್ರಾಮಕ್ಕೆ ಒಂಟಿ ಸಲಗ ನುಗ್ಗಿದೆ.
ಮುಂಜಾನೆ 5 ಗಂಟೆಯ ಸುಮಾರಿಗೆ ಗ್ರಾಮದ ಸುತ್ತಲೂ ಅಡ್ಡಾಡಿದ ಒಂಟಿ ಸಲಗ, ರಸ್ತೆ ಬದಿಯಲ್ಲಿ ಕಲ್ಲಂಗಡಿ ಅಂಗಡಿ ಬಳಿ ಹೋಗಿದೆ. ಈ ವೇಳೆ ಅಲ್ಲೇ ಗಾಢ ನಿದ್ರೆಗೆ ಜಾರಿದ್ದ ಅಂಗಡಿ ವ್ಯಾಪಾರಸ್ಥರಾದ ದಂಪತಿಗೆ ಇತರೆ ಗ್ರಾಮಸ್ಥರು ಬೊಬ್ಬೆ ಹಾಕಿ ಎಬ್ಬಿಸಿ ಓಡುವಂತೆ ಹೇಳಿದ್ದಾರೆ.
ಅದರಂತೆ ದಂಪತಿ ಎದ್ನೋ ಬಿದ್ನೋ ಎಂದು ಅಲ್ಲಿಂದ ಓಡಿದರು. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದಂಪತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.