Breaking News

ಸಂಕಷ್ಟದಲ್ಲಿ ಬಸನಗೌಡ ಯತ್ನಾಳ್, ಸಕ್ಕರೆ ಕಾರ್ಖಾನೆಗೆ ನೀಡಿರುವ ನೋಟೀಸ್​ಗೆ 24 ಗಂಟೆಗಳಲ್ಲಿ ಉತ್ತರಿಸಲು ಸೂಚನೆ

Spread the love

ಕಲಬುರಗಿ: ದೃಶ್ಯಗಳಲ್ಲಿ ಕಾಣುತ್ತಿರೋದು ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿರುವ ಸಿದ್ಧಸಿರಿ ಸಕ್ಕರೆ ಕಾರ್ಖಾನೆ (Siddha Siri Ethanol and Power). ಬಿಜೆಪಿ ಫೈರ್ ಬ್ರ್ಯಾಂಡ್ ನಾಯಕನೆಂದು ಗುರುತಿಸಿಕೊಳ್ಳುವ ಮತ್ತುವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಇದರ ಮಾಲೀಕ. ಬಿಜೆಪಿ ನಾಯಕರು (BJP leaders) ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂಜರಿಯುವ ಸಂಗತಿ ನಮಗೆಲ್ಲ ಗೊತ್ತಿದೆ. ಆದರೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಇಲಾಖೆಯು ಪಾಟೀಲ್ ಮತ್ತು ಅವರ ಕಾರ್ಖಾನೆ ವಿರುದ್ಧ ನೋಟೀಸೊಂದನ್ನು ಜಾರಿ ಮಾಡಿದ್ದು ಕೇವಲ 24 ಗಂಟೆಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಸಿದ್ಧಸಿರಿ ಕಾರ್ಖಾನೆಯಲ್ಲಿ ಅನುಮತಿ ಪಡೆಯದೆ ಕಬ್ಬು ಅರೆಯಲಾಗಿದೆಯಂತೆ. ಕಬ್ಬು ಅರೆದಿರುವುದು ವಾಯು ನಿಯಂತ್ರಣ ಮಂಡಳಿ ಕಾಯ್ದೆಯ ಉಲ್ಲಂಘನೆ ಎಂದು ನೋಟೀಸ್ ನಲ್ಲಿ ತಿಳಿಸಲಾಗಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭೆಯಲ್ಲಿ ಬಜೆಟ್ ಮಂಡಿಸುವಾಗ ಶಾಸಕ ಯತ್ನಾಳ್ ಸದನದಲ್ಲಿದ್ದರು. ಬಜೆಟ್ ಅಧಿವೇಶನ ಸೋಮವಾರ ಪುನರಾರಂಭಗೊಳ್ಳುವುದರಿಂದ ಅವರು ವಿಜಯಪುರ ಅಥವಾ ಕಲಬುರಗಿಗೆ ಬಂದಿರುವ ಸಾಧ್ಯತೆಯೂ ಇದೆ.


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ