Breaking News

ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ಸ್ಪೀಕರ್

Spread the love

ಮುಂಬೈ ಫೆಬ್ರುವರಿ 15: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narwekar) ಗುರುವಾರಅಜಿತ್ ಪವಾರ್(Ajit Pawar) ಅವರ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿಯನ್ನು ವಜಾಗೊಳಿಸಿದ್ದು, ಅವರ ಬಣವು ರಾಜ್ಯ ವಿಧಾನಸಭೆಯಲ್ಲಿ ಶರದ್ ಪವಾರ್ (Sharad Pawar) ಬಣವನ್ನು ಗಣನೀಯವಾಗಿ ಮೀರಿಸಿದೆ ಎಂದು ತೀರ್ಪು ನೀಡಿದ್ದಾರೆ. ಎನ್‌ಸಿಪಿಯೊಳಗೆ ಅಜಿತ್ ಪವಾರ್ ಬಣಕ್ಕೆ ಹೆಚ್ಚಿನ ಬಹುಮತವಿದೆ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳು ಪರಸ್ಪರ ವಿರುದ್ಧವಾಗಿ ಸಲ್ಲಿಸಿರುವ ಅನರ್ಹತೆ ಅರ್ಜಿಗಳ ತೀರ್ಪು ನೀಡಿದ ನಾರ್ವೇಕರ್ ಹೇಳಿದ್ದಾರೆ.

ಕಳೆದ ವರ್ಷ ಜೂನ್ 30 ಮತ್ತು ಜುಲೈ 2 ರ ನಡುವೆ ಅಜಿತ್ ಪವಾರ್ ಅವರ ಬಣದ ಕ್ರಮಗಳು ಮತ್ತು ಹೇಳಿಕೆಗಳು ಪಕ್ಷಾಂತರದ ಕೃತ್ಯಗಳಲ್ಲ, ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಎಂದು ಸ್ಪೀಕರ್ ತೀರ್ಪು ನೀಡಿದ್ದರು. ಪಕ್ಷಾಂತರದ ಆಧಾರದ ಮೇಲೆ ಶಾಸಕರ ಅನರ್ಹತೆಗೆ ಸಂಬಂಧಿಸಿದ ಭಾರತದ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ನಿಬಂಧನೆಯನ್ನು ಸದಸ್ಯರ ಬಾಯಿ ಮುಚ್ಚಿಸಲು ಅಥವಾ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಬಳಸಬಾರದು. ಅದು ಕಾನೂನಿನ ಸಂಪೂರ್ಣ ದುರುಪಯೋಗವಾಗುತ್ತದೆ ಮತ್ತು ಕಾನೂನಿನ ವಾದಕ್ಕೆ ವಿರುದ್ಧವಾಗಿರುತ್ತದೆ ಎಂದು ನಾರ್ವೇಕರ್ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ಎನ್‌ಸಿಪಿಯ ಹೆಸರು ಮತ್ತು ಅದರ ಗಡಿಯಾರದ ಚಿಹ್ನೆಯನ್ನು ಪಡೆಯುತ್ತದೆ ಎಂದು ಭಾರತದ ಚುನಾವಣಾ ಆಯೋಗವು ತೀರ್ಪು ನೀಡಿತ್ತು. ಚುನವಾಣಾ ಆಯೋಗ ಅಜಿತ್ ಪವಾರ್ ಬಣವೇ ನಿಜವಾದ ಎನ್​​ಸಿಪಿ ಎಂದು ಘೋಷಿಸಿದ್ದು ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮೊದಲು ಶರದ್ ಪವಾರ್​​ಗೆ ಇದು ದೊಡ್ಡ ಹೊಡೆತವಾಗಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ